ಕರ್ನಾಟಕ

ಹೊತ್ತಿ ಉರಿದ ಕಾರುಗಳು

ಬೆಳಗಾವಿ,ನ.03: ಬೆಳ್ಳಂಬೆಳಿಗ್ಗೆ  ಗಾಂಧಿನಗರ  ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ 1 ಟಾಟಾ ಏಸ್, 2 ಕಾರುಗಳು ಧಗಧಗನೆ ಹೊತ್ತಿ ಉರಿದು ಸುಟ್ಟು ಕರಕಲಾದ ಘಟನೆ ನಡೆದಿದೆ.

ಹಳೇ ಗಾಂಧಿನಗರದ ರಸ್ತೆ ಪಕ್ಕದಲ್ಲಿಯೇ ಇದ್ದ ಕಸದ ರಾಶಿಯಲ್ಲಿ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ.ಒಂದು ಟಾಟಾ ಏಸ್ ಮತ್ತು ಎರಡು ಕಾರುಗಳು ನಿಂತಿದ್ದವು. ಇದರ ಪರಿಣಾಮ ಪಕ್ಕದಲ್ಲಿದ್ದ ಕಾರುಗಳಿಗೂ ಬೆಂಕಿ ಹೊತ್ತಿಕೊಂಡಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ತಾವೇ ನೀರು ತಂದು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಅಲ್ಲೇ ಪಕ್ಕದಲ್ಲಿ ಗ್ಯಾಸ್ ಮತ್ತು ಪೆಟ್ರೋಲ್ ಬಂಕ್ ಇದ್ದುದ್ದರಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಈ ಅವಘಡ ಸಂಭವಿಸಿದಾಗ ಜನರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೂ ಪೊಲೀಸರು ಕ್ಯಾರೆ ಎನ್ನಲಿಲ್ಲ ಎಂದು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.  ( ವರದಿ : ಪಿ.ಎಸ್ )

Leave a Reply

comments

Related Articles

error: