ಕರ್ನಾಟಕ

ತುರುವೇಕೆರೆಯಲ್ಲಿ ರೋಡ್ ಶೋ ನಡೆಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ರಾಜ್ಯ (ತುಮಕೂರು)ನ.3:- ಪರಿವರ್ತನಾ ಯಾತ್ರೆಯ ಎರಡನೆಯ ನೇ ದಿನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂಜಾನೆ ಯಡಿಯೂರು ಸಿದ್ದಲಿಂಗೇಶ್ವರನ ದರ್ಶನಾಶೀರ್ವಾದಗಳನ್ನು ಪಡೆಯುವುದರ ಮೂಲಕ ಆರಂಭಿಸಿದರು.

ಬಳಿಕ  ತುರುವೇಕೆರೆಯಲ್ಲಿ ರೋಡ್ ಶೋ ನಡೆಸಿದರು. ಅಲ್ಲಿನ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ  ಸಿದ್ದರಾಮಯ್ಯನವರ ಸರ್ಕಾರದ ಭ್ರಷ್ಟಾಚಾರಗಳು, ಹಗರಣಗಳು ಮತ್ತು ವೈಫಲ್ಯಗಳ ಸರಮಾಲೆಗಳನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನರೇಂದ್ರಮೋದಿ ಸರ್ಕಾರದ ಜೊತೆಗೂಡಿ ವೇಗದಲ್ಲಿ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು. ಮುಖಂಡರುಗಳಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಶ್ರೀರಾಮುಲು ಮುಂತಾದವರು ಪಾಲ್ಗೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: