ಸುದ್ದಿ ಸಂಕ್ಷಿಪ್ತ

ಕೈಗಾರಿಕಾ ಶೃಂಗಸಭೆ : ಪೂರ್ವಭಾವಿ ರೋಡ್ ಶೋ

ಚಾಮರಾಜನಗರ, ನ. 4: – ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನವೆಂಬರ್ 23 ಹಾಗೂ 24ರಂದು ಇಂಟರ್ ನ್ಯಾಷನಲ್ ಟ್ರೇಡ್ ಸೆಂಟರ್ ನಲ್ಲಿ ಮಾರಾಟಗಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗ ಸಭೆ ನಡೆಯಲಿದೆ.

ಶೃಂಗ ಸಭೆಯ ಪೂರ್ವಭಾವಿಯಾಗಿ ಈ ತಿಂಗಳ 2ನೇ ವಾರದಲ್ಲಿ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ ಅವರ ಮಳಿಗೆಯಲ್ಲಿ ಏರ್ಪಡಿಸಲಾಗುವುದು.  ಈ ಕಾರ್ಯಕ್ರಮವನ್ನು ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಬಂಡವಾಳ ಹೂಡಿಕೆದಾರರ ಅನುಕೂಲಕ್ಕಾಗಿ ಆಯೋಜಿಸಲಾಗಿದೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದೆ.

ಹೆಚ್ಚಿನ ವಿವರಗಳನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 08226-224915 ಅಥವಾ 08226-224906 ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು ತಿಳಿಸಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: