ಕರ್ನಾಟಕ

ಮಹಿಳೆಯರು ಕಿತ್ತೂರುರಾಣಿ ಚೆನ್ನಮ್ಮನ ರೀತಿ ಧೈರ್ಯವಂತರಾಗಬೇಕು : ಕೆ.ಎಸ್.ಪುಟ್ಟಣ್ಣಯ್ಯ

ರಾಜ್ಯ(ಮಂಡ್ಯ)ನ.4:- ಮಹಿಳೆಯರು ಕಿತ್ತೂರುರಾಣಿ ಚೆನ್ನಮ್ಮನ ಇತಿಹಾಸವನ್ನು ತಿಳಿದುಕೊಂಡು ಅವರ ರೀತಿಯೇ ಧೈರ್ಯವಂತರಾಗಬೇಕು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.

ಪಾಂಡವಪುರ  ಪಟ್ಟಣದ ಮಿನಿವಿಧಾನಸೌಧದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕಿತ್ತೂರುರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.ಮಹಿಳೆಯರು ಕಿತ್ತೂರುರಾಣಿ ಚೆನ್ನಮ್ಮನ ಇತಿಹಾಸವನ್ನು ತಿಳಿದುಕೊಂಡು ಅವರ ರೀತಿಯೇ ಧೈರ್ಯವಂತರಾಗಬೇಕು. ಚೆನ್ನಮ್ಮ ದಿಟ್ಟತನ, ಕೆಚ್ಚೆದೆಯ ಹೋರಾಟ ಹಾಗೂ ಅವರ ಕಾಲದ ರಾಜಾಳ್ವಿಕೆಯ ನೀತಿಗಳ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಆಹ್ವಾನಿಸಬೇಕು ಎಂದು ತಾಲೂಕು ಆಡಳಿತಕ್ಕೆ ಸೂಚಿಸಿದರು. ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಮಾತನಾಡಿ, ಕಿತ್ತೂರು ರಾಣಿಚೆನ್ನಮ್ಮರಂತಹ ಧೀರಮಹಿಳೆಯರು ಜನಿಸಿದ ಕನ್ನಡ ನಾಡಿನಲ್ಲಿ ದಿನನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ, ಅನಾಚಾರ, ದೌರ್ಜನ್ಯಗಳು ನಡೆಯುತ್ತಿರುವುದು ವಿಷಾದನೀಯ ಎಂದು ಬೇಸರವ್ಯಕ್ತಪಡಿಸಿದರು. ಬ್ರಿಟಿಷರ ವಿರುದ್ದ ರಣಕಹಳೆ ಮೊಳಗಿಸಿದ ಚೆನ್ನಮ್ಮ ಬ್ರಿಟಿಷರನ್ನು ದೇಶಬಿಟ್ಟು ಓಡಿಸಲು ಹೋರಾಟ ನಡೆಸಿದರು. ಅಂತಹ ಮಹಿಳೆಯರ ಆದರ್ಶ, ಗುಣಗಳನ್ನು ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷೆ ತಾಯಮ್ಮ ಎ.ಅಣ್ಣಯ್ಯ ಚಾಲನೆ ನೀಡಿದರು. ತಾಪಂ ಸದಸ್ಯ ವಿ.ಎಸ್.ನಿಂಗೇಗೌಡ, ಕಸಾಪ ಅಧ್ಯಕ್ಷ ರಮೇಶ್ ಸೇರಿದಂತೆ ಹಲವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: