ಪ್ರಮುಖ ಸುದ್ದಿಮೈಸೂರು

ಬಿಇಎಂಎಲ್ ಖಾಸಗೀಕರಣ ವಿರೋಧಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ರಕ್ಷಣಾ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಬಿಇಎಂಎಲ್ ಸ್ವಂಸ್ಥೆಯ ಮೇಲಿನ ಕೇಂದ್ರದ ಹಿಡಿತವನ್ನು ತಪ್ಪಿಸಿ ಖಾಸಗೀಕರಣಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಂಸ್ಥೆಯ ಕಾರ್ಮಿಕ ಸಂಘದ ಅಧಿಕಾರಿಗಳ ಒಕ್ಕೂಟ ಮತ್ತು ಗುತ್ತಿಗೆ ಕಾರ್ಮಿಕರು ವಿರೋಧ ವ್ಯಕ್ತಪಡಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಬುಧವಾರದಂದು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಸಂಸ್ಥೆಯ ನೂರಾರು ಕಾರ್ಮಿಕರು ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೃಹತ್ ಸಂಸ್ಥೆಯಾಗಿರುವ ಬಿಇಎಂಎಲ್ ನಿರಂತರವಾಗಿ ಲಾಭದಾಯಕವಾಗಿದ್ದು ರಕ್ಷಣಾ ವಲಯದಲ್ಲಿ ಹಾಗೂ ಮೆಟ್ರೋ ರೈಲ್ವೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದೆ.  ಕೇಂದ್ರ ಸರ್ಕಾರದ ನೀತಿ ಆಯೋಗವು ಪಟ್ಟಿ ಮಾಡಿರುವ ಇಪ್ಪತ್ತೇರಡು ಕಾರ್ಖಾನೆಗಳ ಪೈಕಿ ಸಂಸ್ಥೆಯು ಒಂದಾಗಿದ್ದು ಸರ್ಕಾರದ ಈ ನಡೆಯಿಂದ ಕಾರ್ಮಿಕರು ಆತಂಕಕೀಡಾಗಿದ್ದಾರೆ. ಶೇ. 26 ರಷ್ಟು ಷೇರು ಮಾರಾಟ ಮಾಡಿರುವುದರಿಂದ ಉಳಿದ ಶೇ. 28 ರಷ್ಟು ಷೇರುಗಳನ್ನು ಸರ್ಕಾರ ಉಳಿಸಿಕೊಳ್ಳಲು ತೀರ್ಮಾನಿಸಿದ್ದು ಇದರಿಂದ ಸಂಸ್ಥೆಯು ಖಾಸಗಿಯವರ ಪಾಲಾಗುತ್ತದೆ. ದೇಶದ ರಕ್ಷಣಾ ಸಾಮಗ್ರಿಗಳಿಗೆ ಸಂಬಂಧಿಸಿದಂತ ಗೌಪ್ಯತೆ ಮತ್ತು ತಂತ್ರಜ್ಞಾನ ಖಾಸಗೀಕರಣಗೊಂಡು ದೇಶದ ಭದ್ರತೆಗೆ ಧಕ್ಕೆಯುಂಟಾಗುವುದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸುವವರೆಗೂ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಇಎಂಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ಕೆ. ದೇವದಾಸ್, ಪ್ರಧಾನ ಕಾರ್ಯದರ್ಶಿ ಎಚ್.ಎ. ನಾಗಶಯನ, ಸಹಕಾರ್ಯದರ್ಶಿ ಎಚ್.ಪಿ. ಶಿವಪ್ಪ, ಉಪಾಧ್ಯಕ್ಷ ಗೊವಿಂದರೆಡ್ಡಿ, ಖಜಾಂಚಿ ಚಾಂದ್ ಸಿಂಗ್, ಎಸ್ಸಿಎಸ್ಟಿ ಅಸೋಸಿಯೇಷನ್ ಅಧ್ಯಕ್ಷ ನಾರಾಯಣ್, ಅಧಿಕಾರಿಗಳ ಒಕ್ಕೂಟದ ಕಾರ್ಯದರ್ಶಿ ಚನ್ನವೀರಪ್ಪ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

comments

Related Articles

error: