ಪ್ರಮುಖ ಸುದ್ದಿಮೈಸೂರು

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ಪೋರಿ

ಮೈಸೂರು,ನ.5:-  ಏಳು ವರ್ಷದ ಬಾಲೆಯೋರ್ವಳು ಯಶಸ್ವಿಯಾಗಿ ಚಾಲನೆ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾಳೆ.

ಮೈಸೂರಿನ  ಈದ್ಗಾ ಮೈದಾನದಲ್ಲಿ ಶೋ ನಡೆಸಲಾಗಿತ್ತು. ಬನ್ನಿ ಮಂಟಪದ ಸೇಂಟ್ ಜೋಸೆಫ್ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ರಿಫಾ ತಷ್ಕಿನ್ ಸರಾಗವಾಗಿ ಹತ್ತು ಚಕ್ರದ ಅಶೋಕ ಲೇಲ್ಯಾಂಡ್  ಲಾರಿ ಚಾಲನೆ ಮಾಡಿ ತೋರಿಸುವ ಮೂಲಕ  ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. ಆಕೆಯ ಸಾಧನೆಯನ್ನು  ಪರಿಗಣಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಮ್ಯಾನೇಜರ್ ಸಂತೋಷ್ ಅಗರ್ ವಾಲ್   ರೆಕಾರ್ಡ್ ಘೋಷಣೆ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: