ಕರ್ನಾಟಕ

ಸಂಬಂಧಿಕರ ಸಾವಿಗೆ ಬಂದು ವಾಪಸ್ ಹೋಗುವಾಗ ಬೈಕ್ ಅಪಘಾತ : ಸವಾರ ಸಾವು

ರಾಜ್ಯ(ಮಂಡ್ಯ)ನ.6:- ಸಂಬಂಧಿಕರ ಸಾವಿಗೆಂದು ಬಂದು ವಾಪಸ್ ಹೋಗುತ್ತಿದ್ದ ವೇಳೆ ಅಪಘಾತವಾಗಿ ಸ್ಥಳದಲ್ಲೇ ಓರ್ವರು ಮೃತಪಟ್ಟು ಹಿಂಬದಿ ಸವಾರ  ತೀವ್ರ  ಗಾಯಗೊಂಡಿರುವ  ಘಟನೆ ಮದ್ದೂರು ಉಪ್ಪಿನಕೆರೆ ಗೇಟ್ ಬಳಿ ನಡೆದಿದೆ

ಮೃತರನ್ನು ಚನ್ನಪಟ್ಟಣ   ಟೌನ್ ನಿವಾಸಿ  ರವಿ (35) ಎಂದು ಹೇಳಲಾಗಿದ್ದು ಹಿಂಬದಿ ಸವಾರ ಮೃತರ ತಂದೆ ಪುಟ್ಟಸ್ವಾಮಿ(61) ಎಂದು ತಿಳಿದು ಬಂದಿದೆ .ಈ ಇಬ್ಬರು ಸಂಬಂಧಿಕರಾದ ಗುರುದೇವರಹಳ್ಳಿ ಸಾವಿಗೆಂದು ಬಂದು ವಾಪಸ್ ಹೋಗುತ್ತಿದ್ದ ವೇಳೆ ಮಾರುತಿ ಓಮ್ನಿ ಕಾರೊಂದು ವೇಗವಾಗಿ ಬಂದು ಬೈಕ್ ಗೆ  ಡಿಕ್ಕಿ ಹೊಡೆದಿದೆ ಎನ್ನಲಾಗಿದೆ

ಮೃತರು ಮಂಗಳೂರಿನ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿತ್ತಿದ್ದರು ಎಂದು ತಿಳಿದು ಬಂದಿದೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: