ದೇಶ

ಪ್ರಧಾನಿ ಮೋದಿ ಜಪಾನ್‍ ಪ್ರವಾಸ ಆರಂಭ

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರದಂದು ಜಪಾನ್‍ಗೆ ತೆರಳಿದ್ದು, ಮೂರು ದಿನಗಳ ಪ್ರವಾಸ ನಡೆಸಲಿದ್ದಾರೆ. ಈ ಮೂರು ದಿನಗಳಲ್ಲಿ ಉಭಯ ದೇಶಗಳು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿವೆ ಎನ್ನಲಾಗಿದೆ.

ಪ್ರಧಾನಿ ಮೋದಿ ಅವರು ಇದೇ ಮೊದಲ ಬಾರಿಗೆ ಜಪಾನ್‍ಗೆ ಪ್ರವಾಸ ತೆರಳಿದ್ದು, ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯ ವೃದ್ಧಿಯ ನಿರೀಕ್ಷೆಗಳೊಂದಿಗೆ ತೆರಳುತ್ತಿದ್ದಾರೆ. ತಂತ್ರಜ್ಞಾನ ಹಾಗೂ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಒಡಂಬಡಿಕೆಗಳಿಗೆ ಸಹಿ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರವಾಸ ಹೊರಡುವ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಾನು ಮತ್ತು ಜಪಾನ್ ರಾಷ್ಟ್ರದ ಅಧಿಕಾರಿಗಳೊಂದಿಗೆ ಶಿನ್ಕಾನ್ಸೇನ್ ಬುಲೆಟ್ ರೈಲಿನಲ್ಲಿ ಕೊಬೆಗೆ ತೆರಳಲಿದ್ದೇವೆ. ಈ ರೈಲಿನ ತಂತ್ರಜ್ಞಾನವನ್ನು ಮುಂಬೈ- ಅಹಮದಾಬಾದ್ ಹೈಸ್ಪೀಡ್‍ ರೈಲಿಗೂ ಅಳವಡಿಸಲಾಗುವುದು. ಕೈಗಾರಿಕೆಯಲ್ಲಿ ಸಾಕಷ್ಟು ಮುಂದುವರಿದಿರುವ ಕೂಬೆಯ ಕವಾಸಕಿಗೂ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

Leave a Reply

comments

Related Articles

error: