ಪ್ರಮುಖ ಸುದ್ದಿಮೈಸೂರು

ನೋಟು ಬದಲಾಯಿಸಿಕೊಳ್ಳಲು ಬ್ಯಾಂಕ್‍ಗೆ ಮುಗಿಬಿದ್ದ ಜನ

500 ಮತ್ತು 1000 ರು. ನೋಟುಗಳನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 9 ಗಂಟೆಯಿಂದಲೇ ಬ್ಯಾಂಕ್ ನಲ್ಲಿ ನೋಟು ಬದಲಾವಣೆಗಾಗಿ ಜನರು ಮುಗಿ ಬಿದ್ದಿದ್ದಾರೆ. ಮೈಸೂರಿನ ನಜರ್ ಬಾದ್ ನ ಕೆನರಾ ಬ್ಯಾಂಕ್, ಕೇಂದ್ರ ಎಸ್.ಬಿ.ಐ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್ ಗಳಲ್ಲಿ ಜನ ಕ್ಯೂನಲ್ಲಿ ನಿಂತಿರುವುದು ಕಂಡುಬಂತು.

ಕೆನರಾ ಬ್ಯಾಂಕ್ ನಲ್ಲಿ ಎರಡು ಪ್ರತ್ಯೇಕ ಕೌಂಟರ್ ಗಳನ್ನು ಮಾಡಿ ಗ್ರಾಹಕರಿಗೆ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಬ್ಯಾಂಕ್ ಗೆ ಆಗಮಿಸಿ ನೋಟು ಬದಲಾವಣೆ ಹಾಗೂ ಡೆಪಾಸಿಟ್ ಮಾಡಲು ಮಾರುದ್ದ ಕ್ಯೂನಲ್ಲಿ ನಿಂತಿದ್ದಾರೆ. ಖಾತೆಗೆ ಹಣ ಜಮಾವಣೆ ಮಾಡಲು ಪಾಸ್ ಬುಕ್ ಮತ್ತು ಅದೇ ಬ್ಯಾಂಕ್ ನ ಖಾತೆದಾರನಾಗಿರುವುದು ಕಡ್ಡಾಯವಾಗಿದೆ. 4 ಸಾವಿರ ರೂ.ಗಳನ್ನು ಮಾತ್ರ ಪಡೆಯಲು ಅವಕಾಶ ನೀಡಲಾಗಿದ್ದು, ಹೆಚ್ಚುವರಿ ಎಂದರೆ 10 ಸಾವಿರ ರು. ಮಾತ್ರ ದಿನವೊಂದಕ್ಕೆ ಪಡೆಯಬಹುದಾಗಿದೆ. ಬ್ಯಾಂಕ್ ನಿಂದಲೇ ಹಣ ಬದಲಾವಣೆಗೆ ಪ್ರತ್ಯೇಕವಾದ ಅರ್ಜಿ ಇದ್ದು ಅವುಗಳನ್ನು ಭರ್ತಿ ಮಾಡಿದ ನಂತರ ನಮ್ಮ ಯಾವುದಾರೊಂದು ದಾಖಲಾತಿ ಅಂದರೆ, ವೋಟರ್ ಐಡಿ, ಆಧಾರ್ ಅಥವಾ ಪಾನ್ ಕಾರ್ಡ್ ಹಾಗೂ ಡ್ರೈವಿಂಗ್ ಲೆಸ್ಸೆನ್ಸ್ ನೀಡಿ ಹಣ ಪಡೆಯಬಹುದಾಗಿದೆ.

ಬುಧವಾರ ರಾತ್ರಿಯಿಂದಲೇ ಗ್ರಾಹಕರು ಹೆಚ್ಚಿನದಾಗಿ ಬರುವ ನಿರೀಕ್ಷೆಯಿಂದ ನಾವು ಪೂರ್ಣ ಪ್ರಮಾಣದ ತಯಾರಿ ನಡೆಸಿದ್ದೆವು. ಗ್ರಾಹಕರಿಗೆ ತೊಂದರೆಯಾಗದಂತೆ ನಿಯಮಬದ್ಧವಾಗಿ ವ್ಯವಸ್ಥೆ ಮಾಡಿದ್ದು, ನಮ್ಮ ಇತರೆ ಸಿಬ್ಬಂದಿಯನ್ನು ಗ್ರಾಹಕರ ಸೇವೆಗೆ ನಿಯೋಜನೆ ಮಾಡಿದ್ದೇವೆ ಎಂದು ಬ್ಯಾಂಕ್-ನ ಪ್ರಬಂಧಕರಾದ ಮಹದೇವ ಅವರು ‘ಸಿಟಿಟುಡೆ’ಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಬ್ಯಾಂಕ್ ಗೆ ಆಗಮಿಸಿದ ಗ್ರಾಹಕರೊಬ್ಬರು ಪೇಪರ್ ಓದುತ್ತಾ ಕ್ಯೂ ನಲ್ಲಿ ನಿಂತಿದ್ದು ನೋಡುಗರ ಗಮನ ಸೆಳೆಯಿತು.bank-1

 

Leave a Reply

comments

Related Articles

error: