ಮೈಸೂರು

ಜಾಗವೊಂದಕ್ಕೆ ಸಂಬಂಧಿಸಿದಂತೆ ಠಾಣೆಯ ಮೆಟ್ಟಿಲೇರಿದ ಪ್ರಕರಣ

ಮೈಸೂರು,ನ.6:- ಸಾಹುಕಾರ್ ಚನ್ನಯ್ಯ ರಸ್ತೆಯಲ್ಲಿನ ಜಾಗವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರತಿಷ್ಠಿತ ವ್ಯಕ್ತಿಗಳು ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ.

ವಲಯ ಕಚೇರಿ 4ರ ವ್ಯಾಪ್ತಿಯ ಸಾಹುಕಾರ್ ಚನ್ನಯ್ಯ ರಸ್ತೆ ಪಕ್ಕದ ಸ್ವತ್ತಿನ ಸಂಖ್ಯೆ 353/k ರಲ್ಲಿಯ 100*50 ಅಳತೆಯ ನಿವೇಶನಕ್ಕೆ ಸುಮಾರು 10 ಮಂದಿಯನ್ನು ಕರೆದುಕೊಂಡು ಬಂದು ಅಕ್ರಮವಾಗಿ ಒಳನುಗ್ಗಿ ಅಲ್ಲಿ ಕಾವಲಿದ್ದ ಸಿದ್ದಯ್ಯ ಹಾಗೂ ಶರಣಪ್ಪನವರ ಮೇಲೆ ಏಕಾಏಕಿ ಹಲ್ಲೆ ಮಾಡಿ ಬಾಯಿಗೆ ಬಂದಂತೆ ಬೈದು, ಈ ಜಾಗದಲ್ಲಿದ್ದ ಕಂಪೌಂಡ್ ವಿದ್ಯುತ್ ಕಂಬಗಳನ್ನು ಹಾಳುಗೆಡವಿ, ವಿದ್ಯುತ್ ವೈರ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ನನಗೆ 5ಲಕ್ಷರೂ. ನಷ್ಟವಾಗಿದೆ ಎಂದು  ಹರೀಶ್ ಆಳ್ವಾ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ವೇಳೆ ಶಿಲ್ಪಿ ಅರುಣ್ ಆ ಜಾಗ ತನಗೆ ಸೇರಿದ್ದು, ಅಲ್ಲಿ ಹರೀಶ್ ಆಳ್ವಾ ಅಕ್ರಮ ಪ್ರವೇಶಗೈದು ಕಟ್ಟಡ ಕಟ್ಟಿದ್ದಾರೆಂದು ಶಿಲ್ಪಿ ಅರುಣ್ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: