ಕರ್ನಾಟಕಮೈಸೂರು

ವಾಲ್ಮೀಕಿ ಭವನ ನಿರ್ಮಾಣ: ಸಂಘದ ಸಭೆ ಕರೆಯಲು ಆಗ್ರಹ

ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡಲು ತುರ್ತು ಸಭೆ ಕರೆಯುವಂತೆ ಹೆಚ್.ಡಿ. ಕೋಟೆ ತಾಲೂಕು ನಾಯಕರ ಯುವ ವೇದಿಕೆ ಆಗ್ರಹಿಸಿದೆ. ಮೈಸೂರು ಜಿಲ್ಲೆಯ  ಹೆಚ್.ಡಿ. ಕೋಟೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರದಿಂದ ಈಗಾಗಲೇ 2-83 ಕೋಟಿ ಹಣ ಮಂಜೂರಾಗಿದ್ದು ಕಾಮಗಾರಿ ಆರಂಭಿಸಲು ತಾಲೂಕು ನಾಯಕರ ಸಂಘದ ಸರ್ವ ಸದಸ್ಯರ ಸಭೆ ಕರೆದು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬೇಕು, ಈಗಾಗಲೇ ಗುದ್ದಲಿಪೂಜೆ ನೆರವೇರಿರುವುದರಿಂದ ಮತ್ತೊಮ್ಮೆ ಗುದ್ದಲಿ ಪೂಜೆ ಅವಶ್ಯವಿಲ್ಲ. ಭವನದ ನಿರ್ಮಾಣಕ್ಕೆ ಸಮುದಾಯದ ಮುಖಂಡರ ಸಲಹೆ ಸಹಕಾರವನ್ನು ಪಡೆಯುಬೇಕು ಈ ನಿಟ್ಟಿನಲ್ಲಿ ಸಭೆ ಕರೆಯಬೇಕು ಎಂದು ವೇದಿಕೆಯ ಅಧ್ಯಕ್ಷ ಕ್ಯಾತನಹಳ್ಳಿ ಸಿ. ನಾಗರಾಜು, ಪ್ರಧಾನ ಕಾರ್ಯದರ್ಶಿ ಜಿನ್ನಹಳ್ಳಿ ರಾಜನಾಯ್ಕ, ಗೌರವಾಧ್ಯಕ್ಷ ಚಲುವ ಕೃಷ್ಣ ನಾಯಕ ಹಾಗೂ ಇತರರು ಆಗ್ರಹಿಸಿದ್ದಾರೆ.

Leave a Reply

comments

Related Articles

error: