ಮೈಸೂರು

ಕ್ರಿಸ್ ಮಸ್ ಪ್ರಯುಕ್ತ ಗೀತಾ ಗಾಯನ ಸ್ಪರ್ಧೆ : ನೋಂದಾಣಿಗೆ ಕರೆ

ಮೈಸೂರು, ನ. 6 : ನಗರದ ದಿ ಕ್ಯಾಥೋಲಿಕ್ ಸಂಘವು ಕ್ರಿಸ್ ಮಸ್ ಪ್ರಯುಕ್ತ 13ನೇ ಕ್ರಿಸ್ತ ಜಯಂತಿ ಗಾಯನ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಉಪಾಧ್ಯಕ್ಷ ಎಸ್.ಎಂ.ಆರೋಗ್ಯದಾಸ್ ತಿಳಿಸಿದರು.

ಡಿ.3ರಂದು ಬೆಳಗ್ಗೆ 9 ಗಂಟೆಗೆ ನಗರದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಕನ್ನಡ, ಆಂಗ್ಲ ಇತರೆ ಭಾಷೆಗಳಲ್ಲಿಯೂ ಹಾಡುಗಳನ್ನು ಹಾಡಬಹುದು. ಸ್ಪರ್ಧೆಯೂ ಪ್ರೌಢಶಾಲಾ, ಕಾಲೇಜು, ಕ್ರೈಸ್ತ ಧಾರ್ಮಿಕ ಸಂಸ್ಥೆಗಳು, ಕ್ರೈಸ್ತ ದೇವಾಲಯಗಳು ಹಾಗೂ ವೃತ್ತಿಪರ ಗಾಯನ ವೃಂದಗಳ ಎಂದು ಐದು ಹಂತದಲ್ಲಿ ಸ್ಪರ್ಧೆಗಳು ಜರುಗಲಿವೆ. ಸ್ಪರ್ಧೆಯಲ್ಲಿ  ಭಾಗವಹಿಸುಲಿಚ್ಛಿಸುವವರು ನ.25ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಶಾಲಾ, ಕಾಲೇಜು ವಿದ್ಯಾರ್ಥಿಗಳು ಗುರುತಿನ ಕಾರ್ಡ್ ತರುವುದು ಕಡ್ಡಾಯವಾಗಿದೆ, ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇ.90ರಷ್ಟು ಅಂಕ ಪಡೆದ ಕೆಥೋಲಿಕ್ ಕ್ರೈಸ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಅಧ್ಯಕ್ಷ ಅಲೆಕ್ಸಾಂಡರ್ ವಿನ್ಸೆಂಟ್, ಸುಂದರ್, ಪೈಟ್ ಸಲ್ದನ್, ಹೇಮಾವತಿ, ಆರ್.ಶಾಂತಿ ಮೊದಲಾದವರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: