ಪ್ರಮುಖ ಸುದ್ದಿಮೈಸೂರು

ಮೈಸೂರು ಹುಣಸೂರು ರಸ್ತೆಯ ಅಗಲೀಕರಣಕ್ಕೆ ಗುದ್ದಲಿ ಪೂಜೆ : ಜೀವಗಳನ್ನು ಉಳಿಸಲು ಅಭಿವೃದ್ಧಿ ಅಗತ್ಯ : ಪ್ರತಾಪ್ ಸಿಂಹ

ಮೈಸೂರು,ಮ.6:- ಮೈಸೂರು  ಹುಣಸೂರು ರಸ್ತೆಯ ಅಗಲೀಕರಣಕ್ಕೆ ವಿರೋಧಿಸಿ ಮೈಸೂರು ಗ್ರಾಹಕರ ಪರಿಷತ್ ವತಿಯಿಂದ ಮೌನ ಪ್ರತಿಭಟನೆ  ನಡೆದಿದ್ದು, ಪ್ರತಿಭಟನೆಯ ನಡುವೆಯೇ ರಸ್ತೆ ಅಗಲೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಸೋಮವಾರ ಜಲದರ್ಶಿನಿ ಎದುರು ಸಂಸದ ಪ್ರತಾಪ್ ಸಿಂಹ, ಸಚಿವ ಡಾ.ಮಹದೇವಪ್ಪ, ಶಾಸಕ ವಾಸು ಗುದ್ದಲಿ ಪೂಜೆ ನೆರವೇರಿಸಿದರು.  ಗ್ರಾಹಕರ ಪರಿಷತ್ ವತಿಯಿಂದ ಇದೇ ವೇಳೆ ಪ್ರತಿಭಟನೆ ನಡೆಯುತ್ತಿದ್ದು, ನೂಕಾಟ ನಡೆದು ಸ್ಥಳದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸಫಲರಾದರು. ಪ್ರತಿಭಟನಾಕಾರರು ಸಂಸದರಿಗೆ ಮನವಿಯನ್ನು ಅರ್ಪಿಸಿದ್ದರು. ಇದೇ ವೇಳೆ ರಸ್ತೆ ಅಗಲೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಮಾತನಾಡಿ ನಾಲ್ಕು ಮರಗಳು ಹೋಗುತ್ತವೆ ಎನ್ನುವ ಉದ್ದೇಶದಿಂದ ಪ್ರತಿಭನಾಕಾರರು ರಸ್ತೆ ಅಗಲೀಕರಣ ಬೇಡ ನ್ನುತ್ತಿದ್ದಾರೆ. ಆದರೆ ಜೀವಗಳನ್ನು ಉಳಿಸಬೇಕಾಗಿದೆ. ಕೇಂದ್ರ ಸರ್ಕಾರ ಅಪಘಾತ ವಲಯ ಎಂದು ಗುರುತಿಸಿದಲ್ಲಿ ರಸ್ತೆ ಅಭಿವೃದ್ಧಿಪಡಿಸಿ ಎಂದು ಹೇಳಿದೆ. ಅದರಿಂದ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: