ಕ್ರೀಡೆಮೈಸೂರು

ಎಟಿಎಂಇ ಇಂಜಿನಿಯರಿಂಗ್ ಕಾಲೇಜಿಗೆ ಹ್ಯಾಟ್ರಿಕ್ ಗೆಲುವು

ವಿಟಿಯು ಬೆಂಗಳೂರು ವಿಭಾಗದ ಅಂತರ್ ಕಾಲೇಜು ಸಾಫ್ಟ್ ಬಾಲ್ ಟೂರ್ನಮೆಂಟ್ 2016-17ರಲ್ಲಿ ನಗರದ ಬನ್ನೂರು ರಸ್ತೆಯ ಎಟಿಎಂಇ ಇಂಜಿನಿಯರಿಂಗ್ ಕಾಲೇಜು ತಂಡವೂ ಗೆಲುವು ಸಾಧಿಸುವುದರೊಂದಿಗೆ ಹ್ಯಾಟ್ರಿಕ್ ಗೆಲುವು ಪಡೆದಿದೆ.
ಬೆಂಗಳೂರಿನ ಡಾನ್ ಬಾಸ್ಕೋ ವಿದ್ಯಾ ಸಂಸ್ಥೆಯು ಕಾಲೇಜು ಅವಣರದಲ್ಲಿ ಈಚೆಗೆ ಪಂದ್ಯಾವಳಿಯನ್ನು ಆಯೋಜಿಸಿತ್ತು.
ಪೈನಲ್ ಹಂತದಲ್ಲಿ ಎಟಿಎಂಇ ಕಾಲೇಜು ಹಾಗೂ ಮೈಸೂರಿನ ವಿಟಿಯು ಪಿಜಿ ಕೇಂದ್ರದ ತಂಡಗಳು ಮುಖಾಮುಖಿಯಾಗಿ ಸೆಣಸಿದವು. ಅಂತಿಮವಾಗಿ 8-1 ರನ್ ನಿಂದ ಎಟಿಎಂಇ ಕಾಲೇಜು ತಂಡ ವಿಜಯ ಸಾಧಿಸಿತು. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಬಸವರಾಜ್, ದೈಹಿಕ ಶಿಕ್ಷಣದ ನಿರ್ದೇಶಕ ಮುರಳಿಧರ್ ಎಂ.ಪಿ, ಗ್ರಂಥಪಾಲಕ ನಂದೀಶ್ ಹೆಚ್.ಜಿ ಅವರು ಹರ್ಷವ್ಯಕ್ತಪಡಿಸಿ ತಂಡದ ಕ್ಯಾಪ್ಟನ್ ಗಳಾದ ಪ್ರಫುಲ್ ಮತ್ತು ಸ್ವಾಗತ್ ಅವರು ಕ್ರೀಡಾಪಟುಗಳಾದ ಹೇಮಂತ್, ಅಕ್ಷಯ್, ಗೌತಮ್, ವಿಶಾಲ್, ಕಾರ್ತಿಕ್, ಮನೋಜ್, ನಿತೀನ್, ಪ್ರಶಾಂತ್, ಸಚಿನ್, ಉತ್ತಯ್ಯ, ನಂದೀಶ್, ಪ್ರಮಥ್, ಸಚಿನ್ ಹಾಗೂ ವಿನಯ್ ಗೆ ಇವರುಗಳಿಗೆ ಶುಭಕೋರಿದ್ದಾರೆ.

Leave a Reply

comments

Related Articles

error: