ಪ್ರಮುಖ ಸುದ್ದಿಮೈಸೂರು

ಟಿಪ್ಪು ಜಯಂತಿ ಆಚರಣೆ ಇದೇ ಕೊನೆಯದಾಗಲಿದೆ : ಪ್ರತಾಪ್ ಸಿಂಹ

ಮೈಸೂರು,ನ.6:- ಈ ಬಾರಿಯ ಟಿಪ್ಪು ಜಯಂತಿ ಆಚರಣೆಯೇ ಕೊನೆಯ ಟಿಪ್ಪು ಜಯಂತಿ ಆಚರಣೆಯಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು  ಮುಂದಿನ ವರ್ಷದಿಂದ ಟಿಪ್ಪು ಜಯಂತಿ ಬದಲಿಗೆ ಮೈಸೂರು ಒಡೆಯರ್ ರ ಜಯಂತಿ ಆಚರಣೆ ಮಾಡಲಾಗುವುದು. ಟಿಪ್ಪು ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ, ಟಿಪ್ಪು ಡ್ರಾಪ್ ಮಾತ್ರ ಹೆಸರುವಾಸಿಯಾಗಿದೆ. ಆದರೆ ಮೈಸೂರಿನ ಯದುವಂಶದ ಅರಸರು ನೀಡಿದ ಕೊಡುಗೆಯ ಪರಿಣಾಮ ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಕಾರ್ಯಗಳಾಗಿವೆ. ಹಾಗಾಗಿ ಮುಂದಿನ ವರ್ಷದಿಂದ ಟಿಪ್ಪು ಜಯಂತಿ ಬದಲು ಒಡೆಯರ್ ಜಯಂತಿ ಆಚರಿಸಲಾಗುತ್ತದೆ ಎಂದು ಹೇಳಿದರು. (ಕೆ.ಎಸ್,ಸ್.ಎಚ್)

Leave a Reply

comments

Related Articles

error: