ಮೈಸೂರು

ರಂಗರಾವ್ ವಿಕಲಚೇತನರ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ

ಮೈಸೂರು,ನ.6-ಕರ್ನಾಟಕ ಅಂಧರ ರಾಷ್ಟ್ರೀಯ ಒಕ್ಕೂಟ ಎನ್‍ಆರ್ ಫೌಂಡೇಶನ್ ವತಿಯಿಂದ ನಡೆಸಲಾಗುವ ರಂಗರಾವ್ ಸ್ಮಾರಕ ವಿಕಲಚೇತನರ (ಆರ್‍ಎಂಎಸ್‍ಡಿ) ಶಾಲೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಎನ್.ಆರ್ ಸಮೂಹದ ಅಧ್ಯಕ್ಷ ಗುರು, ಅಂಧರ ರಾಷ್ಟ್ರೀಯ ಒಕ್ಕೂಟದ ವ್ಯವಸ್ಥಾಪಕ ಹೇಮಂತ್ ಕಾರ್ಯಾಗಾರವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಎನ್‍ಆರ್ ಸಮೂಹದ ಅಧ್ಯಕ್ಷ ಗುರು, ದೃಷ್ಟಿಹೀನ ಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಅನೇಕ ಸಂಘ-ಸಂಸ್ಥೆಗಳ ಸಹಾಯ ತೆಗೆದುಕೊಳ್ಳುವ ಮೂಲಕ ಈ ಕಾರ್ಯಾಗಾರವನ್ನು ಯಶಸ್ವಿಗೊಳಿಸುವುದು ನಮ್ಮ ಚಿಂತನೆಯಾಗಿತ್ತು. ಅದರಂತೆ ಈ ತರಬೇತಿಯನ್ನು ಆಯೋಜಿಸಿದ್ದೇವೆ. ತರಬೇತಿಯು ಅಂಧ ವಿದ್ಯಾರ್ಥಿಗಳಿಗೆ ಉತ್ತಮ ಕೌಶಲಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ಅವರ ಭವಿಷ್ಯವನ್ನು ರೂಪಿಸುವಲ್ಲಿಯೂ ಸಹಾಯ ಮಾಡುತ್ತದೆ. ಈ ಕಾರ್ಯಾಗಾರವನ್ನು ಆದರ್ಶವಾಗಿಟ್ಟುಕೊಂಡು ಇಂತಹ ಪ್ರಯೋಜನಕಾರಿ ಕಾರ್ಯಕ್ರಮವನ್ನು ರೂಪಿಸಿದ್ದಕ್ಕಾಗಿ ನಾವು ಕರ್ನಾಟಕದ ಎನ್‍ಎಫ್‍ಬಿಗೆ ಧನ್ಯವಾದ ಹೇಳುತ್ತೇವೆ ಎಂದರು.

ಎರಡು ದಿನಗಳ ಈ ತರಬೇತಿ ಕಾರ್ಯಾಗಾರದಲ್ಲಿ ಶಾಲೆಯ 8, 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ವಿವಿಧ ಸಾಧನಗಳ (ಸ್ಮಾರ್ಟ್ ಫೋನ್, ಡೈಸಿ ಪ್ಲೇಯರ್ ಮತ್ತು ಸ್ಮಾರ್ಟ್ ಕೇನ್) ಬಗ್ಗೆ, ಸಾಮರ್ಥ್ಯ ನಿರ್ಮಾಣದ ಬಗ್ಗೆ ಮತ್ತು ಭವಿಷ್ಯದ ವೃತ್ತಿ ಆಯ್ಕೆಗಳ ಕುರಿತು ತರಬೇತಿ ಮತ್ತು ಮಾರ್ಗದರ್ಶನ ನೀಡಲಾಯಿತು.

ಈ ಅಲ್ಪಾವಧಿಯ ಕಾರ್ಯಾಗಾರಕ್ಕೆ `ಅಂಧ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆ’  ಸಹಾಯ ಮಾಡುತ್ತದೆ. ದೃಷ್ಟಿ ಹೀನತೆ ಹೊಂದಿರುವ ಯುವಕರಿಗೆ ಪರಿಣಾಮಕಾರಿಯಾದ ಮಾರ್ಗದರ್ಶನವನ್ನು ಒದಗಿಸುವಂತೆ ಈ ಕಾರ್ಯಾಗಾರವನ್ನು ರೂಪಿಸಲಾಗುತ್ತದೆ. ಕಾರ್ಯಾಗಾರದಲ್ಲಿ ಸಹಾಯಕ ಕಲಿಕೆ ಮತ್ತು ಕಲಿಕಾ ಸಾಧನಗಳ ಬಗ್ಗೆ ವಿಶೇಷ ಸಮಾಲೋಚನೆ ಮತ್ತು ಮಾಹಿತಿಯನ್ನು ಒದಗಿಸುತ್ತದೆ. ತರಬೇತಿಯ ಅವಧಿಯಲ್ಲಿ ಪಾಲ್ಗೊಂಡವರಿಗೆ ವಿವಿಧ ವೃತ್ತಿ ಆಯ್ಕೆಗಳಲ ಲಭ್ಯತೆಯ ಬಗ್ಗೆ ತಿಳಿಸಲಾಗುತ್ತದೆ ಮತ್ತು ಅನೇಕ ರಂಗಗಳಿಂದ ಬಂದ ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ತರಬೇತುದಾರರು ತರಬೇತಿ ನೀಡುತ್ತಾರೆ. ಕಾರ್ಯಾಗಾರವು ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ-ಆರ್ಥಿಕ ಪುನರ್ವಸತಿ ಕ್ಷೇತ್ರಗಳಲ್ಲಿ ಇರುವ ಹಲವಾರು ಅವಕಾಶಗಳು ಮತ್ತು ಪ್ರಯೋಜನಗಳ ಬಗ್ಗೆ ಅಂಧ ಜನರಿಗೆ ಮಾರ್ಗದರ್ಶನ ನೀಡುತ್ತದೆ.

ಕಾರ್ಯಾಗಾರದಲ್ಲಿ ಅಂಧರ ರಾಷ್ಟ್ರೀಯ ಒಕ್ಕೂಟದ ಕಾರ್ಯನಿರ್ವಾಹಕ ಸಮಿತಿಯ ಸದಸ್ಯ ಫಯಾಜ್, ಗ್ರಂಥಪಾಲಕ ಮಹೇಶ್ ಕುಮಾರ್, ಬ್ರೈಲ್ ಟ್ರಾನ್ಸ್‍ಸ್ಕ್ರಿಪ್ಟರ್ ಹಂಪಯ್ಯ ಮತ್ತು ಡೈಸಿ ಪ್ಲೇಯರ್ ಕನ್ಸಲ್ಟೆಂಟ್ ಸಚಿನ್ ಹಾಜರಿದ್ದರು. (ವರದಿ-ಎಂ.ಎನ್)

 

Leave a Reply

comments

Related Articles

error: