ಕರ್ನಾಟಕಪ್ರಮುಖ ಸುದ್ದಿ

ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಎಐಸಿಸಿ ಪ್ರಧಾನ ಕಾರ್ಯದದರ್ಶಿ ಕೆ . ಸಿ . ವೇಣುಗೋಪಾಲ್ ಭೇಟಿ

ರಾಜ್ಯ(ಮಂಗಳೂರು) ನ.6:-  ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತಿರುವ ಸಹಸ್ರ ಕುಂಭಾಭಿಷೇಕ ಸಂದರ್ಭದಲ್ಲಿ ಕೇರಳ ರಾಜ್ಯ ಸಂಸದ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ   ಕೆ . ಸಿ . ವೇಣುಗೋಪಾಲ್ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.

ಇದೇ ವೇಳೆ  ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ , ಆರೋಗ್ಯ ಸಚಿವ ಯು . ಟಿ . ಖಾದರ್ , ಕೇರಳ ಎಐಸಿಸಿ ಹಾಗೂ ಶಾಸಕ ವಿಷ್ಣುನಾಥ್ , ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೊ , ಎಂಎಲ್ ಸಿ . ಐವನ್ ಡಿ ಸೋಜಾ ಕಾಶೀ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು  ಈ ಸಂದರ್ಭದಲ್ಲಿ   ಶ್ರೀ ವೆಂಕಟರಮಣ ದೇವಳದ ಆಡಳಿತ ಮಂಡಳಿಯ ಜಿ.ರತ್ನಾಕರ್ ಕಾಮತ್ ,  ಡಿ.ವೇದವ್ಯಾಸ್ ಕಾಮತ್ , ಬಂಟ್ವಾಳ ವೆಂಕಟರಮಣ ದೇವಳದ ಮೊಕ್ತೇಸರ ಪ್ರವೀಣ್ ಕಿಣಿ , ಕಾಂಜಂಗಾಡಿನ ಯುವ ಉದ್ಯಮಿ ಗುರುಪ್ರಸಾದ್ ಕಾಮತ್ , ಮಂಜು ನೀರೇಶ್ವಾಲ್ಯ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: