ಕರ್ನಾಟಕಪ್ರಮುಖ ಸುದ್ದಿ

ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಹಾಜರಾಗಿ, ವಿಚಾರಣೆ ಎದುರಿಸಲಿರುವ ಡಿಕೆಶಿ

ರಾಜ್ಯ (ಬೆಂಗಳೂರು)ನ.6:- ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಕುಟುಂಬ ಸದಸ್ಯರಿಂದು ಸಂಜೆ ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಹಾಜರಾಗಿ, ವಿಚಾರಣೆ ಎದುರಿಸಲಿದ್ದಾರೆ.

ಸಚಿವರ ನಿವಾಸ, ಕಛೇರಿಗಳು, ಹಾಗೂ ಅವರ ಸಂಬಂಧಿಕರ ಮನೆ ಕಛೇರಿಗಳ ಮೇಲೆ ಐಟಿ ಅಧಿಕಾರಿಗಳು ಇತ್ತೀಚೆಗೆ ಏಕಕಾಲಕ್ಕೆ ದಾಳಿ ಮಾಡಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಅಕ್ರಮ ಆಸ್ತಿಗಳಿಕೆ ಹಾಗೂ ತೆರಿಗೆ ವಂಚನೆ ಮಾಡಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಸಚಿವರು, ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ಮತ್ತು ಸಂಬಂಧಿಕರ ಮನೆ, ಕಛೇರಿಗಳ ಮೇಲೆ ದಾಳಿ ಮಾಡಿದ್ದರು. ಐಟಿ ಅಧಿಕಾರಿಗಳ ದಾಳಿಗೆ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಗುಜರಾತ್‌ನಿಂದ ರಾಜ್ಯ ಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರ ತಡೆಯಲು ಶಾಸಕರಿಗೆ ಬಿಡದಿ ಸಮೀಪ ರೆಸಾರ್ಟ್‌ನಲ್ಲಿ ಆಶ್ರಯ ನೀಡಿದ್ದರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಉದ್ದೇಶ ಪೂರ್ವಕವಾಗಿ ಐಟಿ ದಾಳಿ ನಡೆಸಿದೆ ಎಂಬ ಆರೋಪಕೇಳಿಬಂದಿತ್ತು. ಮೂರು ದಿನಗಳಿಗೂ ಹೆಚ್ಚು ಕಾಲ, ಶಿವಕುಮಾರ್ ನಿವಾಸ, ಕಛೇರಿಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ದಾಖಲೆ ಪತ್ರಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ. ತಾವು ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ಅಧಿಕಾರಿಗಳು ವಿಧಿಸಿದ್ದ ಷರತ್ತಿನ ಮೇರೆಗೆ ಶಿಕುಮಾರ್ ಮತ್ತು ಅವರ ಕುಟುಂಬ ಸದಸ್ಯರು ಐಟಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: