ಮೈಸೂರು

ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾದ ಗ್ರೀನ್ಸ್ ಕಿಡ್ಸ್ ಡ್ಯಾನ್ಸ್ ಶಾಲೆ

ಮೈಸೂರು,(ಬೈಲಕುಪ್ಪೆ),ನ.6-ಅಫಿಷಿಯಲ್ ಚಾಂಪಿಯನ್‍ಷಿಪ್ ನೃತ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಪಿರಿಯಾಪಟ್ಟಣದ ಕರ್ನಾಟಕ  ಗ್ರೀನ್ಸ್ ಕಿಡ್ಸ್ ಡ್ಯಾನ್ಸ್ ಶಾಲೆ ಆಯ್ಕೆಯಾಗಿದ್ದು, ದ್ವಿತೀಯ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಕರ್ನಾಟಕ ಸ್ಟೇಟ್ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರು ಜಾಲಹಳ್ಳಿಯಲ್ಲಿನ ಸೆಂಟ್ ಕ್ಲಾರೆಟ್ ಕಾಲೇಜು ಆಡಿಟೋರಿಯಂನಲ್ಲಿ ಭಾನುವಾರ ಆಯೋಜಿಸಿದ್ದ 2017-18ನೇ ಸಾಲಿನ ಚಾಂಪಿಯನ್‍ಷಿಪ್ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 130 ಸ್ಪರ್ಧಿಗಳು ಭಾಗವಹಿಸಿದ್ದರು.

ಇವರ ಪೈಕಿ ಗ್ರೀನ್ಸ್‍ಕಿಡ್ಸ್ ಡಾನ್ಸ್ ಸ್ಕೂಲ್ ನ ಓಂಕಾರ್ (2 ಚಿನ್ನ) ಇಷಿತಾ (1 ಚಿನ್ನ), ಭೂಮಿಕಾ (2 ಚಿನ್ನ), ಕೃತಿಕಾ (ಕಂಚು), ಪುಣ್ಯ (ಬೆಳ್ಳಿ), ರಿಶ್ಮಿತಾ (ಚಿನ್ನ), ಪಿ.ಆರ್.ಸ್ಮಿತಾ (2 ಚಿನ್ನ), ಆರ್ಯನ್ (ಚಿನ್ನ), ಛಾಯಾ (ಕಂಚು), ಪಿ.ಆರ್.ರೋಹಿತ್ (ಬೆಳ್ಳಿ), ವರ್ಷಿಣಿ (ಚಿನ್ನ), ಸಂಗೀತಾ (ಚಿನ್ನ ಮತ್ತು ಕಂಚು), ಗುರುರಾಜ್ (ಕಂಚು), ಅಮೂಲ್ಯ (ಚಿನ್ನ), ದೀಕ್ಷಿತ್ (ಕಂಚು), ನಾರಾಯಣ (ಚಿನ್ನ), ದೀಕ್ಷಿತ (ಚಿನ್ನ), ಮಣ್ಣಪ್ಪ (ಬೆಳ್ಳಿ), ಸೌಪರ್ಣಿಕಾ (ಚಿನ್ನ), ಪ್ರಿಯಾಂಕ (ಚಿನ್ನ), ಮಹಾಲಕ್ಷ್ಮಿ (ಚಿನ್ನ) ವನ್ನು ಪಡೆದುಕೊಂಡಿದ್ದು ಭಾಗವಹಿಸಿದ್ದ ಶಾಲೆಯ ಒಟ್ಟು 22 ಮಕ್ಕಳ ಪೈಕಿ 19 ಮಕ್ಕಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಆಕಾಶವಾಣಿ ಆಲ್ ಇಂಡಿಯಾ ರೇಡಿಯೋ ಕಲಾವಿದ ಎಂ.ಆರ್.ಸಂಜೀವಕುಮಾರ್, ಅಸೋಸಿಯೇಷನ್ನಿನ ಪ್ರಧಾನ ಕಾರ್ಯದರ್ಶಿ ಸಿ.ರವಿ, ಸಂಘಟನಾ ಕಾರ್ಯದರ್ಶಿ ವಿನೋದ್ ಕರ್ಕರೆ, ಕಾಲೇಜಿನ ಪ್ರಾಂಶುಪಾಲರಾದ ರೆವರೆಂಜ್ ಫಾದರ್ ತಾವೂ ಜಾರ್ಜ್ ಹಾಜರಿದ್ದರು.

ಆಯ್ಕೆ ಮತ್ತು ಟ್ರೋಫಿ ಪಡೆಯಲು ಕಾರಣರಾದ ಗ್ರೀನ್‍ಕಿಡ್ಸ್ ಡಾನ್ಸ್ ಸ್ಕೂಲಿನ ಸ್ಥಾಪಕ ಮತ್ತು ತರಬೇತುದಾರ ಅಂಬಾರಿ ಪರಮೇಶ್ ರವರನ್ನು ಪೋಷಕರು ಮತ್ತು ಡಾನ್ಸ್ ಅಭಿಮಾನಿಗಳು ಅಭಿನಂದಿಸಿದ್ದಾರೆ. (ವರದಿ-ಆರ್.ಬಿ.ಆರ್, ಎಂ.ಎನ್)

Leave a Reply

comments

Related Articles

error: