ಪ್ರಮುಖ ಸುದ್ದಿಮೈಸೂರು

ಮೈಸೂರಿನಲ್ಲಿ ತಯಾರಾದ 2000 ಮುಖಬೆಲೆಯ ನೋಟು ವಿತರಣೆಗೆ ಸಿದ್ಧ

ಕಪ್ಪುಹಣ ನಾಶಮಾಡುವ ಪ್ರಮುಖ ಆಯುಧವೆಂದೇ ಪರಿಗಣಿಸಬಹುದಾದ 500 ಮತ್ತು 1000 ರು. ನೂತನ ನೋಟುಗಳು ಗುರುವಾರದಿಂದಲೇ ದೇಶದ ಎಲ್ಲ ಬ್ಯಾಂಕುಗಳಲ್ಲಿ ಲಭ್ಯವಿದೆ.

ಸಾರ್ವಜನಿಕರ ಉಪಯೋಗಕ್ಕಾಗಿ ಎಲ್ಲ ಬ್ಯಾಂಕುಗಳು ಶನಿವಾರ ಮತ್ತು ಭಾನುವಾರ (ನ.12 ಮತ್ತು 13ರಂದು ತೆರೆದಿರುತ್ತವೆ ಎಂದು ಆರ್ಬಿಐ ತಿಳಿಸಿದೆ. 500 ಮತ್ತು 1000 ರು. ನೋಟುಗಳು ರದ್ದಾದ ಹಿನ್ನೆಲೆಯಲ್ಲಿ ಅವುಗಳನ್ನು ತೆಗೆದು ಹೊಸ ನೋಟುಗಳನ್ನು ಹಾಕಲು ಬುಧವಾರದಂದು ಬ್ಯಾಂಕ್ ಮತ್ತ ಎಲ್ಲ ಎಟಿಎಂಗಳನ್ನು ಮುಚ್ಚಲಾಗಿತ್ತು.

2000 ರು. ಮುಖಬೆಲೆಯ ಹೊಸ ನೋಟುಗಳು ಮೈಸೂರಿನ ಮೇಟಗಳ್ಳಿಯರುವ ಭಾರತೀಯ ರಿಸರ್ವ್ ಬ್ಯಾಂಕ್‍ನ ನೋಟು ಮುದ್ರಣಾಲಯದಲ್ಲಿ ಮುದ್ರಣವಾಗಿವೆ.

ಹೆಚ್ಚಿನ ಭದ್ರತೆಯ ವೈಶಿಷ್ಟ್ಯ ಹೊಂದಿರುವ ಹೊಸ 2000 ರು. ಮುಖಬೆಲೆಯ ನೋಟುಗಳನ್ನು 4 ತಿಂಗಳಿನಿಂದಲೂ ಮುದ್ರಿಸಲಾಗುತ್ತಿತ್ತು. ಇದುವರೆಗೆ ಒಟ್ಟಾರೆ 2000 ರು. ಮುಖಬೆಲೆಯ 500 ಮಿಲಿಯನ್ ನೋಟುಗಳನ್ನು ಮುದ್ರಿಸಿ ನಾಲ್ಕು ದಿನಗಳ ಹಿಂದಷ್ಟೇ ಆರ್‍ಬಿಐ ಕಚೇರಿಗೆ ಕಳುಹಿಸಿಕೊಡಲಾಗಿದೆ. ಆರ್‍ಬಿಐ ಆದೇಶದ ಮೇರೆಗೆ ರಹಸ್ಯ ಕಾಪಾಡಿದ್ದೇವೆ ಎಂದು ಮೈಸೂರು ಆರ್ಬಿಐ ನೌಕರರ ಸಂಘದ ಅಧ್ಯಕ್ಷ ಎಸ್‍.ಎ. ರಾಮದಾಸ್ ಹೇಳಿದ್ದಾರೆ.

Leave a Reply

comments

Related Articles

error: