ದೇಶ

500 ರು. ನೋಟುಗಳಿದ್ದ ಪರ್ಸ್ ಕೈಬಿಟ್ಟ ದರೋಡೆಕೋರರು

ಆರ್.ಬಿ.ಐ  ಮಂಗಳವಾರದಿಂದ 500-1000 ನೋಟುಗಳ ಚಲಾವಣೆ ನಿರ್ಬಂಧಿಸಿದ್ದರಿಂದ ಏನೆಲ್ಲ ಘಟನೆಗಳು ಸಂಭವಿಸಬಹುದು ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ. ಗ್ರೇಟರ್ ನೊಯ್ದಾದಲ್ಲಿ ದರೋಡೆಕೋರರು ವ್ಯಕ್ತಿಯೋರ್ವನನ್ನು ಅಡ್ಡಗಟ್ಟಿ ಬೆದರಿಸಿ ದರೋಡೆ ನೆಡೆಸಿದ್ದಾರೆ.

ಈ ಸಂದರ್ಭದಲ್ಲಿ ಆತನ ಪರ್ಸಿನಲ್ಲಿದ್ದ 500 ನೋಟುಗಳನ್ನು ನೋಡಿ ಆಕ್ರೋಶಭರಿತರಾಗಿ ಅತನಿಗೆ ಕಪಾಳ ಮೋಕ್ಷ ಮಾಡಿ 100 ರೂಪಾಯಿ ನೋಟುಗಳನ್ನು ಏಕಿಟ್ಟಿಲ್ಲವೆಂದು ಗದರಿಸಿ ಪರ್ಸ್ ಬಿಸಾಕಿ ಬಂದ ದಾರಿಗೆ ಸುಕ್ಕವಿಲ್ಲ ಎಂದು ಹೋಗಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿರುವ  ವಿಕಾಸ್ ಕುಮಾರ್  ಬುಧವಾರ ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ ಪರ್ಸ್ ಕಸಿದು ಪರಾರಿಯಾದರು. ಸ್ವಲ್ಪ ಸಮಯದ ನಂತರ ಬಂದು ಅದೇ ಪರ್ಸ್ ಮರಳಿಸಿ ಕುಪಿತರಾಗಿ ಹಿಂತಿರುಗಿದ್ದಾರೆ ಎಂದು ಪೊಲೀಸರಿಗೆ ವಿಕಾಸ್ ತಿಳಿಸಿದ್ದಾರೆ. ದರೋಡೆ ಮಾಡಿದ ಪರ್ಸ್ ನ್ನು ವಾಪಾಸ್ಸು ನೀಡಿದ್ದು ಕಾರಣವಿಷ್ಟೇ ಅದರಲ್ಲಿದ್ದು ಕೇವಲ 500ರ ನೊಟುಗಳು ಮಾತ್ರ.

Leave a Reply

comments

Related Articles

error: