ಮೈಸೂರು

ಜೂಜಾಡುತ್ತಿದ್ದ 9 ಜನರ ಬಂಧನ : ಪಣವಾಗಿಟ್ಟಿದ್ದ 38 ಸಾವಿರ ರೂ ನಗದು ವಶ

ಮೈಸೂರು (ನ.7): ಮೈಸೂರು ನಗರ ಸಿ.ಸಿ.ಬಿ. ಮತ್ತು ವಿ.ವಿ.ಪುರಂ ಪೊಲೀಸರು ನ.4ರಂದು ಕಾರ್ಯಾಚರಣೆ ನಡೆಸಿ ಜೂಜಾಡುತ್ತಿದ್ದ 9 ಜನರನ್ನು ಬಂಧಿಸಿದ್ದಾರೆ. ಜೊತೆಗೆ ಪಣವಾಗಿಟ್ಟಿದ್ದ 38,350 ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರ ವಿ.ವಿ.ಪುರಂ ಪೊಲೀಸ್ ಠಾಣೆ ಸರಹದ್ದು ಯಾದವಗಿರಿ ಇಂಡಸ್ಟ್ರಿಯಲ್ ಏರಿಯಾದ ಆರ್ಟ್ ಲಿಂಕ್ಸ್ ಎಂಬ ಫ್ಯಾಕ್ಟರಿ ಎದುರು ಇರುವ ಫ್ಯಾಕ್ಟರಿಯೊಂದರ ಹಿಂಭಾಗದಲ್ಲಿರುವ ಖಾಲಿ ಜಾಗಕ್ಕೆ ದಾಳಿ ಮಾಡಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಮಾದರಿ ಜೂಜಾಟ ಆಡುತ್ತಿದ್ದ ರವಿಕಿರಣ್ ಬಿನ್ ರಂಗಸ್ವಾಮಿ (20ವರ್ಷ, ಮಂಜುನಾಥಪುರ); ಡೇವಿಡ್ ಬಿನ್ ವಿಲ್ಸನ್ (35ವರ್ಷ, ಬಂಬೂ ಬಜಾರ್); ಸ್ಟೀವನ್ ಬಿನ್ ಜೇಮ್ಸ್ (23ವರ್ಷ, ಮಂಜುನಾಥಪುರ) ಮಹದೇವ ಬಿನ್ ತಿಮ್ಮಯ್ಯ (28ವರ್ಷ, ಮಂಜುನಾಥಪುರ) ರವಿ ಬಿನ್ ಶಂಕರಪ್ಪ (35ವರ್ಷ, ಮಂಜುನಾಥಪುರ, ಮೈಸೂರು) ಸಂಜು ಬಿನ್ ಸ್ವಾಮಿ (23ವರ್ಷ, ಮಹದೇಶ್ವರ ಬಡಾವಣೆ) ಮುರುಗನ್ ಬಿನ್ ಚಂದ್ರನ್ (25ವರ್ಷ, ಮಂಜುನಾಥಪುರ, ಗೋಕುಲಂ); ಚಂದ್ರ ಬಿನ್ ಶ್ರೀನಿವಾಸ (27ವರ್ಷ, ವಿನಾಯಕನಗರ); ನಾಗೇಂದ್ರ ಬಿನ್ ಲೇಟ್ ರಾಜ (26ವರ್ಷ, ಮಂಜುನಾಥಪುರ, ಮೈಸೂರು) ಎಂಬುವರನ್ನು ಬಂಧಿಸಿದ್ದಾರೆ.

ಈ ಸಂಬಂಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದಾಳಿ ಕಾರ್ಯದಲ್ಲಿ ಸಿಸಿಬಿ ಎ.ಸಿ.ಪಿ. ಸಿ.ಗೋಪಾಲ್‍ರವರ ನೇತೃತ್ವದಲ್ಲಿ ಸಿಸಿಬಿ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್, ಎ.ಎಸ್.ಐ. ಶಾಂತರಾಜು, ಸಿಬ್ಬಂದಿ ಅಸ್ಗರ್‍ಖಾನ್, ಅನಿಲ್.ಕೆ.ಶಂಖಪಾಲ್, ಡಿ.ಶ್ರೀನಿವಾಸಪ್ರಸಾದ್, ಪುರುಷೋತ್ತಮ್, ಶೈಲೇಶ್, ಧನಂಜಯ ಅವರು ಪಾಲ್ಗೊಂಡಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: