ಕರ್ನಾಟಕ

72 ಗಂಟೆಗಳ ಬಳಿಕ ಇಬ್ಬರು ನಟರ ಮೃತದೇಹ ಪತ್ತೆ

ಮಾಸ್ತಿಗುಡಿ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್‍ನಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಬಿದ್ದು ದಾರುಣ ಸಾವು ಕಂಡಿದ್ದ ನಟ ಅನಿಲ್ ಶವ ಗುರುವಾರ ಮತ್ತು ಉದಯ್ ಶವ ಬುಧವಾರ ಸಂಜೆ ಪತ್ತೆಯಾಗಿದೆ.

ನಟ ಉದಯ್ ಶವ ಬುಧವಾರ ಸಂಜೆ ನೀರಿನಲ್ಲಿ ತೇಲಿಬಂದಿದುದರಿಂದ ಪತ್ತೆಯಾಗಿದೆ. ಹೆಲಿಕಾಪ್ಟರ್‍ನಿಂದ ಹಾರಿದ ಸ್ಥಳದ ಆಸುಪಾಸಿನಲ್ಲೇ ಶವ ಪತ್ತೆಯಾಗಿತ್ತು.

ಮುಳುಗು ತಜ್ಞರು, ಎನ್‍ಡಿಆರ್‍ಎಫ್ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಳೆದ ಮೂರು ದಿನಗಳಿಂದ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮೃದೇಹದ ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸ್ಕೂಬಾ ಡೈವರ್ಸ್ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಉದಯ್‍ ಶವವನ್ನು ದಡಕ್ಕೆ ತರುತ್ತಿದ್ದಂತೆ ಅದು ಯಾರ ಶವ ಎಂಬ ಬಗ್ಗೆ ಚರ್ಚೆಗಳು ನಡೆದವು. ಬಳಿಕ ಉದಯ್ ಮೃತದೇಹವೆಂದು ಖಚಿತವಾಯಿತು. ಶವಪರೀಕ್ಷೆಯ ಬಳಿಕ ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿರುವ ನಿವಾಸಕ್ಕೆ ಶವವನ್ನು ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು.

ಗುರುವಾರ ಮುಂಜಾನೆ ಸುಮಾರು 5.30ರ ಆಸುಪಾಸಿನಲ್ಲಿ ನೀರಿಗೆ ಬಿದ್ದಿದ್ದ ಸ್ಥಳದಿಂದ 50 ಮೀಟರ್ ದೂರದಲ್ಲಿ ಅನಿಲ್ ಶವ ಪತ್ತೆಯಾಗಿತ್ತು.

ಉದಯ್ ಅಂತ್ಯಕ್ರಿಯೆಯನ್ನು ಬನಶಂಕರಿ ಚಿತಾಗಾರದಲ್ಲಿ ನೆರವೇರಿಸಲಾಯಿತು. ಅನಿಲ್ ಶವದ ಪರೀಕ್ಷೆ ನಡೆಸಿ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ.

Leave a Reply

comments

Related Articles

error: