ಮೈಸೂರು

“ಪರಿಸರ ಮಿತ್ರ ಶಾಲೆ” ಪ್ರಶಸ್ತಿ ಸ್ಪರ್ಧೆ : ನ.15ರೊಳಗೆ ಸಂಪರ್ಕಿಸಲು ಸೂಚನೆ

ಮೈಸೂರು (ನ.7): ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜನಜಾಗೃತಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ “ಪರಿಸರ ಮಿತ್ರ ಶಾಲೆ” ಪ್ರಶಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸ್ಫರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಶಾಲೆಯಲ್ಲಿ ಆಯ್ದ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಜೊತೆ ಸೇರಿ ತಮ್ಮ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವ-ಮೌಲ್ಯಮಾಪನ ಮಾಡಿ ಪರಿಸರ ನಿರ್ವಹಣೆಯಲ್ಲಿ ಸ್ಪರ್ಧಾತ್ಮಕ ಪ್ರಗತಿ ಹೊಂದಿದ್ದೆವೆಯೇ ಎಂದು ನಿರ್ಣಯಿಸಿ ನಿಗದಿತ ಪ್ರಶ್ನಾವಳಿಯಲ್ಲಿ ಪ್ರಯತ್ನ ಮತ್ತು ಸಾಧನೆಗಳನ್ನು ವಿವರಿಸಬೇಕಾಗುತ್ತದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಶಾಲೆಗಳ ಮುಖ್ಯಾಧ್ಯಾಪಕರು ನ.15ರೊಳಗಾಗಿ ದೂರವಾಣಿ, ಎಸ್‍ಎಮ್‍ಎಸ್, ಪೋಸ್ಸ್ ಕಾರ್ಡ್ ಮೂಲಕ ಹೆಸರನ್ನು ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು ಇವರಲ್ಲಿ ನೊಂದಾಯಿಸಿಕೊಳ್ಳಬೇಕು. ನೋಂದಾಯಿಸಿಕೊಂಡ ಇಬ್ಬರು ಶಿಕ್ಷಕರಿಗೆ ನವಂಬರ್ 30 ರ ಒಳಗಾಗಿ ತರಬೇತಿ ನೀಡಿ ಪ್ರಶ್ನಾವಳಿಯನ್ನು ಹಂಚಲಾಗುವುದು.

ಶಾಲೆಗಳಿಂದ ಸ್ವ-ಮೌಲ್ಯಮಾಪನ ಮಾಹಿತಿ ತುಂಬಿದ ಪ್ರಶ್ನಾವಳಿಯನ್ನು ಡಿ.30 ರ ಒಳಗೆ ಮರಳಿ ಜನಜಾಗೃತಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ – ಮೈಸೂರು ಇವರಿಗೆ ನೀಡಬೇಕು. ಮೌಲ್ಯಮಾಪಕರನ್ನು ಆಯ್ದ ಮೌಲ್ಯಮಾಪನ ಮಾಡಿ 30 ಶಾಲೆಗಳ ವಿವರವನ್ನು ಜ.10ರಂದು ಸಿದ್ಧಪಡಿಸಲಾಗುವದು. ಆಯ್ದ ಶಾಲೆಗಳಿಗೆ ಮೌಲ್ಯಮಾಪನ ಮಾಡಿದ ಪರಿಣಿತರು ಭೇಟಿ ನೀಡಿ 21 ಶಾಲೆಗಳನ್ನು ಪ್ರಶಸ್ತಿಗಾಗಿ ಜನವರಿ 20 ರಂದು ಆಯ್ಕೆ ಮಾಡುವರು. ಮೊದಲನ ಸ್ಥಾನ ಪಡೆಯುವ ಶಾಲೆಯನ್ನು ರಾಜ್ಯಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುವುದು.

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೊದಲ ಜಿಲ್ಲಾ ಮಟ್ಟದ “ಪರಿಸರ ಮಿತ್ರ ಶಾಲೆ”ಗೆ 30 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. 2 ರಿಂದ 11ನೇ ಸ್ಥಾನದವರೆಗೆ ಆಯ್ಕೆಯಾದವರಿಗೆ ತಲಾ ರೂ. 5 ಸಾವಿರ, 12 ರಿಂದ 21ನೇ ಸ್ಥಾನದವರೆಗೆ ಆಯ್ಕೆಯಾದವರಿಗೆ ತಲಾ ರೂ. 4 ಸಾವಿರ ಬಹುಮಾನ ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ ಪರಿಸರ ಅಧಿಕಾರಿ, ಪ್ರಾದೇಶಿಕ ಕಛೇರಿ –1, ಮೈಸೂರು (ನಗರ), # 436 – ಡಿ, ಹೆಬ್ಬಾಳ್ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್. ರಸ್ತೆ, ಮೇಟಗಳ್ಳಿ, ಮೈಸೂರು – 570 016. ದೂರವಾಣಿ ಸಂಖ್ಯೆ: 0821-2519411, ಮೊಬೈಲ್ ಸಂಖ್ಯೆ: 9844972002 ಮತ್ತು ಕಾರ್ಯನಿರ್ವಹಕ ನಿರ್ದೇಶಕರು, ಜನಜಾಗೃತಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ನಂ. 29, 11 ನೇ ಕ್ರಾಸ್ 1 ನೇ ಮುಖ್ಯ ರಸ್ತೆ, ಬಿ.ಎಂ.ಶ್ರೀ. ನಗರ, ಮೇಟಗಳ್ಳಿ, ಮೈಸೂರು-570016 ಮೊಬೈಲ್ : 9513231913, 8050007401, 9844596602 ಅನ್ನು ಸಂಪರ್ಕಿಸಬಹುದು.

(ಎನ್‍ಬಿಎನ್‍)

Leave a Reply

comments

Related Articles

error: