ಮೈಸೂರು

ಕುಮಾರಪರ್ವ ಸಮಾವೇಶಕ್ಕೆ ಚಾಲನೆ ನೀಡಿದ ಎಚ್.ಡಿ.ದೇವೇಗೌಡ

ಮೈಸೂರು,ನ.7-ಮೈಸೂರಿನ ಲಿಂಗದೇವರುಕೊಪ್ಪಲಿನಲ್ಲಿ ನಡೆಯುತ್ತಿರುವ ಕುಮಾರಪರ್ವ ಸಮಾವೇಶವನ್ನು ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉದ್ಘಾಟಿಸಿದರು.

ಈ ವೇಳೆ ದೇವೇಗೌಡರಿಗೆ ಪತ್ನಿ ಚೆನ್ನಮ್ಮ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಥ್ ನೀಡಿದರು. ಸಿಎಂ ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ತೋರಿಸಿದೆ. ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಹರ್ಷೋದ್ಗಾರದಿಂದ ಕೂಗಿದರು. ಸಮಾವೇಶದಲ್ಲಿ ನಾವೆಲ್ಲ ಶಕ್ತಿ ಎನ್ನುವ ಮೂಲಕ ಮುಖಂಡರು ಕೈ ಎತ್ತಿದರು.

 

ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಂಸದ ಎಚ್.ವಿಶ್ವನಾಥ್, ಮಹಾಪೌರ ಎಂ.ಜೆ.ರವಿಕುಮಾರ್, ಜೆಡಿಎಸ್ ನಗರಾಧ್ಯಕ್ಷ ಹರೀಶ್ ಗೌಡ ಇತರರು ಉಪಸ್ಥಿತರಿದ್ದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: