ಮೈಸೂರು

ಜನತೆಯ ಸುರಕ್ಷತೆಗಾಗಿ ನಮ್ಮ ಓಟಕ್ಕೆ ಚಾಲನೆ

ಮೈಸೂರು,ನ.7:- ಮಂಗಳವಾರ ಬೆಳಿಗ್ಗೆ  ತಾಲೂಕಿನ, ನಗರದ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಂಜನಗೂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ “ಜನತೆಯ ಸುರಕ್ಷತೆಗಾಗಿ ನಮ್ಮ ಓಟ” ಎಂಬ ಜಾಗೃತಿ ಓಟವನ್ನು ಹಮ್ಮಿಕೊಳ್ಳಲಾಗಿತ್ತು.

ಪೊಲೀಸ್ ಅಧಿಕಾರಿ ಸುಜಿತಾ ಮಾತನಾಡಿ ದೇಶ ಅಭಿವೃದ್ಧಿಯಾದಂತೆ ಸಮಾಜದಲ್ಲಿ ಅಪರಾಧಗಳು ನಡೆಯುತ್ತಿದ್ದು ಅವುಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ. ಕಳ್ಳತನ, ಸರಗಳ್ಳತನ, ವಾಹನ ಚಾಲನೆಯ ಅಪರಾಧ, ಅಪಘಾತ, ವಾಹನಗಳ ಕಳ್ಳತನ ಇನ್ನೂ ಮುಂತಾದವುಗಳು ನಡೆಯುತ್ತಿದ್ದು ಇವುಗಳನ್ನು ನಿಯಂತ್ರಿಸಲು ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲದೇ, ಸಾರ್ವಜನಿಕರೂ ಕೂಡ ಇಂತಹ ಅಪರಾಧಗಳನ್ನು ತಡೆಯಲು ಜಾಗೃತರಾಗಬೇಕಿದ್ದು ನಿಮ್ಮ ಸುರಕ್ಷತೆಗಾಗಿ ನಮ್ಮ ಓಟ”ವನ್ನು ಅಯೋಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ “ಜನತೆಯ ಸುರಕ್ಷತೆಗಾಗಿ ನಮ್ಮ ಓಟ” ಆಯೋಜಿಸಲಾಗಿದೆ, ಪಟ್ಟಣದಿಂದ ಅಥವಾ ನಗರದಿಂದ ಸಾರ್ವಜನಿಕರು ಮನೆಯಿಂದ ಒಂದಕ್ಕಿಂತ ಹೆಚ್ಚು ಜನ ಹೊರ ಹೋದರೆ ಹೋಗುವಾಗ ಆರಕ್ಷಕ ಠಾಣೆಗೆ ಮಾಹಿತಿ ತಿಳಿಸಿ, ವಿಳಾಸ, ನಿಮ್ಮ ದೂರವಾಣಿ, ಮತ್ತು ಹೋಗುತ್ತಿರುವ ಸ್ಥಳದ ಮಾಹಿತಿ, ಮತ್ತು ಅಕ್ಕ ಪಕ್ಕದ ಮನೆಯವರ ದೂರವಾಣಿಗಾಗಿ ಮಾಹಿತಿ ನೀಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಇದರಿಂದ ಅಪರಾಧಗಳು ನಡೆಯದಂತೆ ಜಾಗೃತೆವಹಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಓಟದಲ್ಲಿ ಹಿರಿಯ ಅಧಿಕಾರಿ ಸುಜಿತಾ, ವೃತ್ತ ನಿರೀಕ್ಷಕ ಗೋಪಾಲಕೃಷ್ಣ, ಸಿ.ಎಸ್.ಸವಿ, ಅರಸು, ಮತ್ತು ಪಿ.ಎಸ್.ಐ. ಆನಂದ್, ಚೇತನ್ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: