ದೇಶ

ನೂತನ 2000 ರೂ ನೋಟಿನಲ್ಲಿ ನ್ಯಾನೋ ಚಿಪ್ ಇಲ್ಲ : ಸಾರ್ವಜನಿಕ ವದಂತಿಗೆ ತೆರೆ

ನೂತನವಾಗಿ ಚಲಾವಣೆಗೆ ಬರುತ್ತಿರುವ 2000 ರೂ ನೋಟುಗಳಲ್ಲಿ ನ್ಯಾನೋ ಜಿಪಿಎಸ್ ಚಿಪ್ ಗಳನ್ನು ಅಳವಡಿಸಲಾಗಿದೆ ಎನ್ನುವ ಸಾರ್ವಜನಿಕರ ಊಹಾಪೋಹಗಳಿಗೆ ತೆರೆ ಎಳೆದ ಆರ್.ಬಿ.ಐ ವಕ್ತಾರ ಅಪ್ಲಾನಾ ಕಿಲ್ಲಾವಾಲಾ ನೋಟಿನ ತಂತ್ರಜ್ಞಾನದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಎನ್.ಜಿ.ಸಿ. ತಂತ್ರಜ್ಞಾನವು ವಿಶ‍್ವದಲ್ಲಿ ಎಲ್ಲಿಯೂ ಇಲ್ಲ. ಹೀಗಿದ್ದಾಗ ಭಾರತದಲ್ಲಿ ಅಸ್ತಿತ್ವಕ್ಕೆ ತರಲು ಸಾಧ್ಯವಿಲ್ಲ. ಹೊಸ ನೋಟಿನ ವೈಶಿಷ್ಟತೆಗಳನ್ನು ಆರ್ಬಿಐ ವೆಬ್‍ಸೈಟ್ ನಲ್ಲಿ ನೀಡಲಾಗಿದ್ದು ಒಂದು ಮಗ್ಗಲಿನಲ್ಲಿ ಮಹಾತ್ಮ ಗಾಂಧಿ ಚಿತ್ರ ಮತ್ತೊಂದು ಕಡೆ ಮಂಗಳಯಾನದ ಚಿತ್ರವಿದೆ ಎಂದು ತಿಳಿಸಿದ್ದಾರೆ.

ನ್ಯಾನೋ ಜಿಪಿಎಸ್ ಇಲ್ಲ : 2000 ರೂಪಾಯಿ ನೋಟಿನಲ್ಲಿ ಎನ್ ಜಿಸಿ ಚಿಪ್ ಅಳವಡಿಸಲಾಗಿದೆ ಇದರಿಂದ ನೋಟುಗಳನ್ನು 150 ಮೀಟರ್ ಆಳದಲ್ಲಿಯೂ ಹೂತಿಟ್ಟರು ಉಪಗ್ರಹದ ಸಂಪರ್ಕಕ್ಕೆ ದೊರೆಯುವುದು. ಆ ನೋಟುಗಳನ್ನು ನಂಬರ್ ಸಮೇತ ಸುಲಭವಾಗಿ ಪತ್ತೆ ಹಚ್ಚಬಹುದು ಎನ್ನುವ ಸಾರ್ವಜನಿಕರ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ.

Leave a Reply

comments

Related Articles

error: