
ಕರ್ನಾಟಕಪ್ರಮುಖ ಸುದ್ದಿ
ಕಾಂಗ್ರೆಸ್ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದೆ : ಶಾಸಕ ಸಿ.ಟಿ.ರವಿ ಆರೋಪ
ರಾಜ್ಯ(ಹಾಸನ)ನ.8:- ನೋಟು ನಿಷೇಧಕ್ಕೆ ಇಂದಿಗೆ ಒಂದು ವರ್ಷ, ಆರಂಭದಲ್ಲಿ ಸ್ವಾಗತ ಮಾಡಿದ್ದ ಕಾಂಗ್ರೆಸ್ ನವರು ಇಂದು ಕರಾಳದಿನ ಆಚರಿಸುತ್ತಿದ್ದಾರೆ,ಇದು ಕಾಂಗ್ರೆಸ್ ನ ಗೋಸುಂಬೆತನಕ್ಕೆ ಸಾಕ್ಷಿ, ಹತಾಶೆಯಿಂದ ಈ ನಡೆಗೆ ಮುಂದಾಗಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇದು ಬ್ಲಾಕ್ ಡೇ ಅಲ್ಲ, ಬ್ಲಾಕ್ ಮನಿ ಡೇ, ನೋಟು ನಿಷೇಧ, ಹಣಕಾಸು ಶುದ್ಧೀಕರಣಕ್ಕೆ ಪ್ರಧಾನಿ ಮೋದಿ ಅವರು ತೆಗೆದುಕೊಂಡಿರುವ ಐತಿಹಾಸಿಕ ಕ್ರಮವಿದಾಗಿದೆ. ಇದನ್ನು ದೇಶದ ಜನ ಸ್ವಾಗತಿಸಿದ್ದಾರೆ, ಆದರೆ ಕಾಂಗ್ರೆಸ್ ನವರು ರಾಜಕೀಯ ಕಾರಣಕ್ಕೆ ನಾಟಕ ಆಡುತ್ತಿದ್ದಾರೆ ಎಂದರು. ಟಿಪ್ಪು ಜಯಂತಿ ತಡೆಗೆ ಹೈಕೋರ್ಟ್ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ನಿಷೇಧ ಮಾಡುತ್ತೇವೆ, ಸಂತ ಶಿಶುನಾಳ ಶರೀಫರ ಜಯಂತಿ ಆಚರಣೆ ಮಾಡುತ್ತೇವೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದರು. 20ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪರಮೇಶ್ವರ್ ಹೇಳಿಕೆಗೆ ಟಾಂಗ್ ನೀಡಿದ ಅವರು ಮುಳುಗುತ್ತಿರುವ ಹಡಗು ಏರಲು ಯಾರೂ ಹೋಗಿಲ್ಲ,ಪರಮೇಶ್ವರ್ ಅತ್ತುಕರೆದು ಮಂತ್ರಿಯಾಗುವ ಸ್ಥಿತಿ ಇದೆ, ಅವರನ್ನು ಮುಂದೆಯೂ ಸೋಲಿಸುತ್ತಾರೆ, ಅವರ ರಾಜಕೀಯ ಹಿತದೃಷ್ಟಿಯಿಂದ ಬಿಜೆಪಿಗೆ ಬರಲಿ, ಇದು ಕೆಪಿಸಿಸಿ ಅಧ್ಯಕ್ಷರಿಗೆ ಕಡೇ ಆಹ್ವಾನ ಎಂದು ಗೇಲಿ ಮಾಡಿದರು. (ಕೆ.ಎಸ್,ಎಸ್.ಎಚ್)