ಮೈಸೂರು

ರೈಲ್ವೇ ಗೇಟ್ ಬಳಿ ಅಪರಿಚಿತ ವ್ಯಕ್ತಿಯೋರ್ವರ ಮೃತದೇಹ ಪತ್ತೆ

ಮೈಸೂರು,ನ.8:- ಮೈಸೂರಿನ ಜಯನಗರದ ರೈಲ್ವೇ ಗೇಟ್ ಬಳಿ ಅಪರಿಚಿತ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ.

ಸುಮಾರು 5ರಿಂದ 6ರಡಿ ಎತ್ತರವಿರುವ ಅಪರಿಚಿತ ವ್ಯಕ್ತಿ ನೀಲಿ ಕಲರ್ ಶರ್ಟ್ ಮತ್ತು ನೀಲಿ ಕಲರ್ ಪ್ಯಾಂಟ್ ಧರಿಸಿದ್ದಾರೆ. ಬುಧವಾರ ಬೆಳಿಗ್ಗೆ ಮೈಸೂರು ಕಡೆ ಬರುವ 8.30ರ ರೈಲ್ವೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.  ಮಾರ್ಗದಲ್ಲಿ ಬಂದವರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ರೈಲ್ವೆ ಪೊಲೀಸರು ಸ್ಥಲಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಪರಿಚಿತ ವ್ಯಕ್ತಿ ಯಾರು, ಎಲ್ಲಿಯವರು, ಕೊಲೆಯೋ, ಆತ್ಮಹತ್ಯೆಯೋ ಎನ್ನುವ ಕುರಿತು ತನಿಖೆಯ ನಂತರವೇ ತಿಳಿದು ಬರಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: