ಮೈಸೂರು

ಹಣಕಾಸಿನ ವಿಚಾರದಲ್ಲಿ ಮನಸ್ತಾಪ: ಯುವಕನನ್ನು ಕಿಡ್ನಾಪ್ ಮಾಡಿದಾಕೆಗೆ ಜೈಲು

ನಗರದ ರಾಮಕೃಷ್ಣನಗರದ ನಿವಾಸಿಯಾಗಿರುವ ವಿಶ್ವನಾಥ್ ಎಂಬುವರ ಪತ್ನಿ ಶಾಂತಿ(34) ಎಂಬಾಕೆ ರಿಯಲ್ ಎಸ್ಟೇಟ್‍ ಉದ್ಯಮ ನಡೆಸುತ್ತಿದ್ದು, ದುಡ್ಡಿನ ವಿಚಾರವಾಗಿ ಯುವಕನೊಬ್ಬನನ್ನು ಕಿಡ್ನಾಪ್‍ ಮಾಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ.

ಹೆಬ್ಬಾಳ ನಿವಾಸಿಯಾಗಿರುವ ಸಂತೋಷ್ ಮತ್ತು ಶಾಂತಿ ನಡುವೆ ಹಣಕಾಸಿನ ವಿಚಾರವಾಗಿ ಮನಸ್ತಾಪವೇರ್ಪಟ್ಟಿತ್ತು. ಕೆಲ ದಿನಗಳ ಹಿಂದೆ ಹೆಬ್ಬಾಳದಲ್ಲಿರುವ ಸಂತೋಷ್ ಕಚೇರಿಗೆ ತನ್ನ ಸಂಗಡಿಗರೊಂದಿಗೆ ತೆರಳಿದ ಶಾಂತಿ ಆತನನ್ನು ಥಳಿಸಿ ತನ್ನೊಂದಿಗೆ ರಾಮಕೃಷ್ಣನಗರಕ್ಕೆ ಕರೆತಂದು ಕೂಡಿ ಹಾಕಿದ್ದಳು ಎನ್ನಲಾಗಿದೆ. ಈ ಬಗ್ಗೆ ಸಂತೋಷ್ ಪೋಷಕರು ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಸಬ್‍-ಇನ್ಸ್‍ಪೆಕ್ಟರ್ ಸುನಿಲ್ ಕುಮಾರ್ ರಾಮಕೃಷ್ಣ ನಗರದಲ್ಲಿ ಬಂಧನದಲ್ಲಿದ್ದ ಸಂತೋಷ್‍ನನ್ನು ಬಿಡುಗಡೆಗೊಳಿಸಿ ಶಾಂತಿಯನ್ನು ಬಂಧಿಸಿದ್ದಾರೆ. ಶಾಂತಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

Leave a Reply

comments

Related Articles

error: