ಮೈಸೂರು

ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಸೋಲಿನ ಹತಾಶೆಯಲ್ಲಿದ್ದಾರೆ : ಆರೋಪ

ಮೈಸೂರು, ನ.8 : ಸಿಎಂ ಸಿದ್ದರಾಮಯ್ಯನವರನ್ನು, ಸಚಿವ ಹೆಚ್.ಆಂಜನೇಯರ ಅವರನ್ನು ಹುಚ್ಚರೆಂದು ಸಂಬೋಧಿಸಿರುವ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಚುನಾವಣಾ ಸೋಲಿನಿಂದ ಹತಾಶರಾಗಿ ಪ್ರಸಾದ್ ರವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಂದು ರಾಜ್ಯ ಆದಿಜಾಂಬವ ಸಂಘದ ವಿಭಾಗೀಯ ಅಧ್ಯಕ್ಷ ಎಡತೊರೆ ಎಂ.ನಿಂಗರಾಜ್ ದೂರಿದರು.

ಪತ್ರಕರ್ತರ ಭವನದಲ್ಲಿ, ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಚಿವರು ರಾಜ್ಯದ ಹಿರಿಯ ಪ್ರಭಾವಿ ರಾಜಕಾರಣಿಗಳಾಗಿದ್ದು, ಬಹಿರಂಗ ಹೇಳಿಕೆಗಳನ್ನು ನೀಡುವಾಗ ಸಂಯಮ ಅವಶ್ಯವಾಗಿದೆ, ಇದೇ ದೋರಣೆಯನ್ನು ಪ್ರಸಾದ್ ಮುಂದುವರೆಸಿದರೆ ಖಂಡನಾ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿರುವ ಆದಿಜಾಂಬವ ಜನಾಂಗವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಆಧ್ಯತೆಗೆ ನೀಡಲು ಡಾ.ಡಿ.ತಿಮ್ಮಯ್ಯನವರು ನೇತೃತ್ವದಲ್ಲಿ ಮಾಡಿದ ಹೋರಾಟದ ಫಲವಾಗಿ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸ್ಪಂಧಿಸಿರುವುದು ಶ್ಲಾಘನೀಯವೆಂದ ಅವರು, ನಮ್ಮ ಹೋರಾಟಕ್ಕೆ ಶಾಸಕ ಕಳಲೆ ಕೇಶವಮೂರ್ತಿ ಜಾಗೃತರಾಗಿ ನಂಜನಗೂಡಿನಲ್ಲಿ ಚರ್ಮ ಕೈಗಾರಿಕಾ ಸಹಕಾರ ಸಂಘಕ್ಕೆ ಭೂಮಿಯಲ್ಲಿ ಸಮುದಾಯ ಭವನ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ 3.60 ಕೋಟಿ ರೂಗಳನ್ನು ಮಂಜೂರು ಮಾಡಿರುವುದನ್ನು ಪ್ರಶಂಸಿದರು.

ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜ ರಾಜೇಂದ್ರ, ಸಹಕಾರ್ಯದರ್ಶಿ ಮಹದೇವಯ್ಯ ನಿಟ್ರೆ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: