
ಪ್ರಮುಖ ಸುದ್ದಿಮೈಸೂರು
ನೋಟ್ ಬ್ಯಾನ್ ಆಗಿ ವರ್ಷ ಕಳೆದರೂ ಯಾವುದೇ ಸುಧಾರಣೆಯಾಗಿಲ್ಲ ; ಡಾ,ಹೆಚ್.ಸಿ.ಮಹದೇವಪ್ಪ
ಮೈಸೂರು,ನ.8:- ನೋಟು ಅಮಾನ್ಯೀಕರಣ ವಿಚಾರ ಹೊಸದಲ್ಲ. ಕಾಂಗ್ರೆಸ್ ಪಕ್ಷವು ಹಿಂದೆ ನೋಟ್ ಬ್ಯಾನ್ ಮಾಡಿತ್ತು. ನೋಟ್ ಬ್ಯಾನ್ ಮಾಡಬೇಕು ಆದರೆ ಆರ್ ಬಿಐನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ,ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಧಾನಿ ಮೋದಿ ಆರ್ ಬಿ ಐ ಜೊತೆ ಚರ್ಚಿಸದೆ ಸ್ವ ನಿರ್ಧಾರದಿಂದ ಮಾಡಿ ದೇಶದ ಜನತೆಯನ್ನು ತತ್ತರಿಸುವಂತೆ ಮಾಡಿದ್ದಾರೆ. ಆದರೆ ಹಿಂದಿನ ನಮ್ಮಕಾಂಗ್ರೆಸ್ ಸರ್ಕಾರ ನೋಟ್ ಬ್ಯಾನ್ ಮಾಡುವಾಗ ಆರ್ ಬಿಐನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ನೋಟ್ ಬ್ಯಾನ್ ಮಾಡಿತ್ತು. ನೋಟ್ ಬ್ಯಾನ್ ಸಮಸ್ಯೆ 50 ದಿನದಲ್ಲಿ ಸುಧಾರಣೆ ಆಗುತ್ತೆ ಅಂತ ಮೋದಿ ಹೇಳಿದ್ದರು. ಆದರೆ ಒಂದು ವರ್ಷವೇ ಕಳೆದಿದೆ. ಯಾವುದೇ ಸುಧಾರಣೆಯಾಗಿಲ್ಲ. ಇನ್ನೂ ದೇಶದ ಜನರು ನೋಟ್ ಬ್ಯಾನ್ ಸಮಸ್ಯೆಯಿಂದ ಹೊರ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಈ ಕುರಿತು ಉತ್ತರಿಸಬೇಕಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. (ಕೆ.ಎಸ್,ಎಸ್.ಎಚ್)