ಮೈಸೂರು

ಸಣ್ಣ ಪ್ರಮಾಣದ ಕೈಗಾರಿಕೋದ್ಯಮಿಗಳಿಗೆ ಜಾಗೃತಿ ಕಾರ್ಯಕ್ರಮ

ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ನಡೆಸವುದರಿಂದ ಕೈಗಾರಿಕೋದ್ಯಮಿಗಳಿಗೆ ಸರಕಾರದ ನೂತನ ಯೋಜನೆಗಳ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ಸಿಂಡಿಕೇಟ್‍ ಬ್ಯಾಂಕ್ ಮ್ಯಾನೇಜರ್ ಅತುಲ್ ಕುಮಾರ್ ಹೇಳಿದರು.

ಮೈಸೂರು ಕೈಗಾರಿಕಾ ಸಂಘ ಮತ್ತು ಎಮ್‍ಎಸ್‍ಎಮ್‍ಇ ಕೌನ್ಸಿಲ್ ಮೈಸೂರು ಇದರ ಸಹಯೋಗದೊಂದಿಗೆ ಜಿಲ್ಲಾ ಕೈಗಾರಿಕೆ ಕೇಂದ್ರ ಆಯೋಜಿಸಿದ್ದ ಸಿಜಿಟಿಎಸ್‍ಎಸ್‍, ಸಿಎಲ್‍ಸಿಎಸ್‍ಎಸ್‍, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಮುದ್ರಾ ಯೋಜನೆಗಳ ಬಗ್ಗೆ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಕಾರದ ವಿವಿಧ ಯೋಜನೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಜಾಗೃತಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ದೇಶದಲ್ಲಿ ಕೈಗಾರಿಕೆ ಕ್ಷೇತ್ರದ ಬೆಳವಣಿಗೆಯಲ್ಲಿ ಸಿಂಡಿಕೇಟ್ ಬ್ಯಾಂಕ್ ಪ್ರಮುಖ ಪಾತ್ರವಹಿಸಿದೆ. ಕೋರ್ ಬ್ಯಾಂಕಿಂಗ್‍ನಲ್ಲಿ ವ್ಯವಸ್ಥೆಯನ್ನು ಮೊದಲು ಪರಿಚಯಿಸಿದ ಮೊದಲ ಬ್ಯಾಂಕ್ ನಮ್ಮದು. ಅತ್ಯಾಧುನಿಕ ಬ್ಯಾಂಕಿಂಗ್ ತಂತ್ರಜ್ಞಾನವನ್ನು ಬಳಸಿರುವ ಮೊದಲಿಗರು ನಾವು. ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಮತ್ತು ಕೈಗಾರಿಕೋದ್ಯಮಿಗಳ ಅನುಕೂಲಕ್ಕೆ ತಕ್ಕಂತೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು.

ಶಾಸಕ ವಾಸು, ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಪಿ. ವಿಶ್ವನಾಥ್, ಸಿಂಡಿಕೇಟ್‍ ಬ್ಯಾಂಕ್ ಡಿಜಿಎಂ ಎಸ್‍. ರಮಾ ರಾವ್, ಎಜಿಎಂ ಎಸ್. ಮುಕ್ತಾ, ಎಮ್‍ಐಎ ಉಪಾಧ್ಯಕ್ಷ ಉಮೇಶ್ ಕೆ. ಶೆಣೈ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: