ಮೈಸೂರು

ಕರ್ನಾಟಕ ಗರಿಮೆ ಹೆಚ್ಚಿಸಿದ ಜೆಎಸ್ಎಸ್ ಎಸ್ ಮತ್ತು ಟಿ ವಿದ್ಯಾರ್ಥಿಗಳು

ಮಹಾರಾಷ್ಟ್ರದ ಲೋನವಾಲದಲ್ಲಿ ಜರುಗಿದ ನ್ಯಾಷನಲ್ ಯೂತ್ ಲೀಡರ್ ಶಿಪ್ ಕ್ಯಾಂಪ್ ನಲ್ಲಿ ಮೈಸೂರಿನ ಜೆ.ಎಸ್.ಎಸ್. ಸೈನ್ಸ್ & ತಂತ್ರಜ್ಞಾನ ವಿವಿಯ ಮ್ಯಾನೇಜ್ ಮೆಂಟ್ ಸ್ಟಡೀಸ್ ವಿಭಾಗಕ್ಕೆ ಅತ್ಯುತ್ತಮ ಪುರಸ್ಕಾರ ಲಭಿಸಿದೆ. ಶಿಬಿರದಲ್ಲಿ ದೇಶದಾದ್ಯಂತ ಸುಮಾರು 130 ಎಂಬಿಎ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದು ಮೂರನೇಯ ರಾಷ್ಟ್ರೀಯ ಮಟ್ಟದ ಲೀಡರ್ ಶಿಪ್ ಶಿಬಿರವಾಗಿತ್ತು. ಕರ್ನಾಟಕ ರಾಜ್ಯದಿಂದ ಪಾಲ್ಗೊಂಡ ಏಕೈಕ ತಂಡವಾಗಿತ್ತು. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳ ಅಳವಡಿಕೆ, ಜೀವನದ ದೂರದೃಷ್ಟಿ, ಸವಾಲುಗಳನ್ನು ಎದುರಿಸಿ ಸಮಸ್ಯೆಗಳಿಂದ ಕಲಿಯಬೇಕಾದ ಪಾಠಗಳ ಬಗ್ಗೆ ಸವಿಸ್ತಾರವಾಗಿ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಸೂಪ್ತ ಮನದ ಜಾಗೃತಿ ಹಾಗೂ ಕೌಶಲ್ಯ ಗುಣಗಳನ್ನು ಹೆಚ್ಚಿಸುವ ಬಗ್ಗೆ ತಿಳಿಸಲಾಯಿತು.

ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿ ಶಿವಶರಣ  ‘ರಾಷ್ಟ್ರಶಿಲ್ಪಿ’ ವಿಡಿಯೋ ತುಣುಕಿಗೆ ಅತ್ಯುತ್ತಮ ಸಾಮಾಜಿಕ ಸಂದೇಶ ಪ್ರಶಸ್ತಿ ಲಭಿಸಿದೆ. ವೈಶಾಖ್ ರವೀಂದ್ರನ್ ಅನುಕರಣೀಯ ಉತ್ತಮ ನಾಯಕತ್ವ ಕೌಶಲ್ಯ ಸ್ಪರ್ಧೆಯಲ್ಲಿ ಐವರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. (ಚಿತ್ರದಲ್ಲಿ) ಜೆಎಸ್ಎಸ್ಎಸ್ಟಿಯು ರಿಜಿಸ್ಟ್ರಾರ್ ಡಾ.ಕೆ.ಎಸ್.ಲೋಕೇಶ್, ಉಪ ಕುಲಪತಿ ಡಾ.ಬಿ.ಜಿ.ಸಂಗಮೇಶ್ವರ್, ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಪಿ.ನಾಗೇಶ್, ಯುವ ಸಂಘಟಕ ಡಾ.ಬೆಟ್ಟಿನ ಸಿ ಸುಧಾಕರ್  (ನಿಂತಿರುವ ಮೊದಲ ಸಾಲು) ಹರ್ಷ ಪಿ, ಕಾರ್ತಿಕ್, ಜಿ.ಶಿವಶರಣ, ದನುಷ್ ಮತ್ತು ಪ್ರಣವ್ ಪೊನ್ನಪ್ಪ, (ಎರಡನೇ ಸಾಲು) ಸ್ಟೀವ್ ಡೊನಲ್, ತಿಮ್ಮಯ್ಯ, ಸುಜಯ ಅಶೋಕನ್ ಮತ್ತು ವೈಶಾಖ್ ರವೀಂದ್ರನ್ ಕಾಣಬಹುದು.

Leave a Reply

comments

Related Articles

error: