ಸುದ್ದಿ ಸಂಕ್ಷಿಪ್ತ

ತಥಾಸ್ತು ಕಥಾಸ್ಪರ್ಧೆ

ಸೋಮವಾರಪೇಟೆ,ನ.8: ತಥಾಸ್ತು ಸಾತ್ವಿಕ ಸಂಸ್ಥೆಯಿಂದ ‘ನನ್ನವರು’ ವಿಷಯದ ಬಗ್ಗೆ ರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಮಟ್ಟದ ‘ತಥಾಸ್ತು ಕಥಾಸ್ಪರ್ಧೆ’ಯನ್ನು ಆಯೋಜಿಸಲಾಗಿದ್ದು, ಆಸಕ್ತರು ಅಂಚೆ ಮೂಲಕ ಕಥೆಗಳನ್ನು ಕಳುಹಿಸಬಹುದಾಗಿದೆ ಎಂದು ಸಂಸ್ಥೆಯ ಸಂಚಾಲಕರಾದ ಶೋಭಾ ಶಿವರಾಜ್ ತಿಳಿಸಿದ್ದಾರೆ.

ಮೌಲ್ಯಯುತ ಕಥೆಗಳಿಗೆ ಮಾತ್ರ ಅವಕಾಶವಿದ್ದು, ತಮ್ಮ ಕೈಬರಹದಲ್ಲಿ ಎರಡೂವರೆ ಪುಟಕ್ಕೆ ಮೀರದಂತೆ ಹಾಳೆಯ ಒಂದೇ ಮಗ್ಗುಲಿನಲ್ಲಿ ಸ್ಪಷ್ಟ ಕನ್ನಡದಲ್ಲಿಯೇ ಕಥೆಗಳನ್ನು ಬರೆದು ಕಳುಹಿಸಬಹುದಾಗಿದೆ. ಯಾವದೇ ಮಾಧ್ಯಮಗಳಲ್ಲೂ ಪ್ರಕಟವಾಗದ ಮತ್ತು ಆಂಗ್ಲ ಪದಗಳನ್ನು ಒಳಗೊಂಡಿರದ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.

ಆಯ್ಕೆಗೊಂಡ ಮೂರು ಉತ್ತಮ ಕಥೆಗಳಿಗೆ ಸಂಸ್ಥೆಯಿಂದ ಬಹುಮಾನ ನೀಡಲಾಗುವದು. ಆಸಕ್ತರು ತಾ. 30ರೊಳಗಾಗಿ ತಮ್ಮ ಭಾವಚಿತ್ರದೊಂದಿಗೆ ಅಂಚೆ ವಿಳಾಸ/ದೂರವಾಣಿ ಸಂಖ್ಯೆಯನ್ನು ಒಳಗೊಂಡಂತೆ ತಮ್ಮ ಕಥೆಗಳನ್ನು ತಥಾಸ್ತು ಕಥಾ ಸ್ಪರ್ಧೆ, ಅಧ್ಯಕ್ಷರು, ತಥಾಸ್ತು ಸಾತ್ವಿಕ ಸಂಸ್ಥೆ, ಅಂಚೆ ಪೆಟ್ಟಿಗೆ ಸಂಖ್ಯೆ 40, ಸೋಮವಾರಪೇಟೆ ಅಂಚೆ, ಸೋಮವಾರಪೇಟೆ-571236 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9481431764 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: