ಸುದ್ದಿ ಸಂಕ್ಷಿಪ್ತ

ವಿರ್ ವಿಧ ಡ್ಯಾನ್ಸ್ ಅಂಡ್ ಮಾರ್ಷಲ್ ಅಕಾಡೆಮಿ ರಾಷ್ಟ್ರಮಟ್ಟ ಚಾಂಪಿಯನ್ ಶಿಫ್ ಗೆ ಆಯ್ಕೆ

ಮೈಸೂರು,ನ.8 : ರಾಜಧಾನಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪೋರ್ಟ್ಸ್ ಡ್ಯಾನ್ಸ್ ಸ್ಪರ್ಧೆಯಲ್ಲಿ ನಗರದ ವಿರ್ ವಿಧ ಡ್ಯಾನ್ಸ್ ಅಂಡ್ ಮಾರ್ಷಲ್ ಅಕಾಡೆಮಿಗೆ 22 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕ ಗೆಲ್ಲುವ ಮೂಲಕ ಸಮಗ್ರ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

ಸ್ಪರ್ಧೆಯಲ್ಲಿ ಶಾಸ್ತ್ರೀಯ, ಜಾನಪದ ಹಾಗೂ ಪಾಶ್ಚಾತ್ಯ ನೃತ್ಯ ಪ್ರಕಾರಗಳನ್ನು ಪ್ರಸ್ತುತ ಪಡಿಸಲಾಯಿತು. ವೈಯುಕ್ತಿಕವಾಗಿ ರಾಹುಲ್ ಎಸ್.ರಾವ್, ಯಶಸ್ವಿನಿ ಹಾಗೂ ಶಶಾಂಕ್ ತಲಾ 2 ಚಿನ್ನದ ಪದಕ ಗಳಿಸುವ ಮೂಲಕ ಸಮಗ್ರ ಚಾಂಪಿಯನ್ ಶಿಪ್ ಗೆ ಪಾತ್ರವಾಗಿದ್ದು, ತಂಡವು ಗೋವಾದಲ್ಲಿ ನಡೆಯುವ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ರಾಜ್ಯವನ್ನು ಪ್ರತಿನಿಧಿಸುವುದು. (ಕೆ.ಎಂ.ಆರ್)

Leave a Reply

comments

Related Articles

error: