ಮೈಸೂರು

ನ. 11- 12 ಪದವೀಧರ ಪ್ರಾಥಮಿಕ ಶಿಕ್ಷಕರ ಪರೀಕ್ಷೆ : ಡಿ.ರಂದೀಪ್

ಮೈಸೂರು ನ,9:-  – ಪ್ರಾಥಮಿಕ ಶಾಲೆ 6 ರಿಂದ 8 ನೇ ತರಗತಿಗೆ  ಪದವೀಧರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಇದೇ ಮೊದಲ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಈ ಪರೀಕ್ಷೆ ನಡೆಸಲು ಬೇಕಾಗುವ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಮೈಸೂರಿನ ಜಲದರ್ಶಿನಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಅರ್ಜಿ ಆಹ್ವಾನಿಸಿದ್ದು,  ಮೈಸೂರು ಜಿಲ್ಲೆಯಲ್ಲಿ 7 ಪರೀಕ್ಷಾ ಕೇಂದ್ರಗಲ್ಲಿ ಒಟ್ಟು 2909 ಅಭ್ಯಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸ್ವರ್ಧಾತ್ಮಕ ಪರೀಕ್ಷೆಯು ನವೆಂಬರ್ 11 ಮತ್ತು ನವೆಂಬರ್ 12 ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆಯುತ್ತದೆ ಎಂದರು. ಪರೀಕ್ಷೆಯನ್ನು ಸುಗಮವಾಗಿ ಯಾವುದೇ ಲೋಪಗಳಿಲ್ಲದಂತೆ ನಡೆಸಲು  7 ಪರೀಕ್ಷಾ  ಕೇಂದ್ರಗಳಿಗೆ 7 ಅಧೀಕ್ಷಕರನ್ನು ಮತ್ತು 3 ಫೀಲ್ಡ್ ಆಫಿಸರ್ಸ್ ನೇಮಿಸಲಾಗಿದೆ. ಪರೀಕ್ಷೆ ನಡೆಯುವ ವೇಳೆ ಸೂಕ್ತವಾದ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ  ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮೈಸೂರು ಉಪವಿಭಾಗಾಧಿಕಾರಿ  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: