ಮೈಸೂರು

ವಿಚಾರಣೆಗೆ ಹಾಜರಾಗಲು ಸೂಚನೆ

ಮೈಸೂರು ನ.9:- ಕನಕ ಗೃಹ ನಿರ್ಮಾಣ ಸಹಕಾರ ಸಂಘ ನಿ., ಕಾರ್ಯದರ್ಶಿ ( ಅರ್ಜಿದಾರರು) ಎದುರುದಾರರಾದ ಸಂಘದ ನಿರ್ದೇಶಕರುಗಳಾದ, ಕೆಂಪಲಿಂಗಯ್ಯ, ಕೆ. ಬಾಲಗೋಪಾಲನ್, ಕೆ. ಗೋಪಿನಾಥ್, ಮಾಧವನ್, ಸಿ.ರಾಜನ್, ರಾಮಚಂದ್ರನ್, ಕೆ. ಉನ್ನಿಕೃಷ್ಣನ್, ಶ್ರೀಮತಿ ಎಂ,ಎನ್.ಶಶಿಧರ್ ಬಿನ್ ಟಿ.ಎನ್.ನಾಗರಾಜ್, ಎಂ.ರಮೇಶ್, ಲೋಕೇಶ್ ಬಿನ್ ಕೆಂಪಲಿಂಗಯ್ಯ, ಜಗದಾಂಬ, ಭಾರತಿರವರ ವಿರುದ್ಧ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 70 ರಡಿ ದಾವೆಯನ್ನು ದಾಖಲಿಸಿರುತ್ತಾರೆ.

ಹಲವಾರು ದಿನಾಂಕಗಳಂದು ದಾವಾ ಅರ್ಜಿಯ ವಿಚಾರಣೆಯನ್ನು ನಡೆಸಲಾಗಿದ್ದು, ಅರ್ಜಿದಾರರು ಹಾಗೂ ಎದುರು ಅರ್ಜಿದಾರರು ಹಲವಾರು ವಿಚಾರಣೆಗೆ ಗೈರಾಗಿದ್ದಾರೆ.  ಮುಂದಿನ ವಿಚಾರಣೆಯನ್ನು ನವೆಂಬರ್ 27ರಂದು ಬೆಳಿಗ್ಗೆ 11 ಗಂಟೆಗೆ  ಮೈಸೂರು ವಿಭಾಗದ ಸಹಕಾರ ಸಂಘಗಳ ಸಹಯಕ ನಿಬಂಧಕರ ನ್ಯಾಯಾಲಯದಲ್ಲಿ ನಿಗದಿಪಡಿಸಲಾಗಿದೆ. ವಿಚಾರಣೆಯ ದಿನ ತಪ್ಪದೇ ಹಾಜರಾಗತಕ್ಕದೆಂದು ತಿಳಿಸಿದೆ. ತಪ್ಪಿದಲ್ಲಿ ಲಭ್ಯ ದಾಖಲೆಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೈಸೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: