ಪ್ರಮುಖ ಸುದ್ದಿಮೈಸೂರು

ಜೈಲಿನಲ್ಲಿ ಹೊಡೆದಾಡಿಕೊಂಡ ಕೈದಿಗಳು: ಓರ್ವ ಸಾವು

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಬ್ಬರ ನಡುವೆ ಹೊಡೆದಾಟ ನಡೆದಿದ್ದು, ಘಟನೆಯಲ್ಲಿ ಓರ್ವ ತೀರ್ವಸ್ವರೂಪದ ಗಾಯಗೊಂಡು ಪರಿಣಾಮ ಮೃತಪಟ್ಟಿದ್ದಾನೆ. ಕಿರಣ್‍ ಶೆಟ್ಟಿ ಎಂಬಾತನಿಂದ ಥಳಿತಕ್ಕೊಳಗಾಗಿ ಗಂಭೀರ ಸ್ವರೂಪ ಗಾಯಗೊಂಡಿದ್ದ ಮುಸ್ತಾಫ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಮೂಲಗಳ ಪ್ರಕಾರ ಮುಸ್ತಾಫ ಮತ್ತು ಶೆಟ್ಟಿ ಇಬ್ಬರು ಮಂಗಳೂರು ಮೂಲದವರು. ಆಗಾಗ ಇಬ್ಬರೂ ಕ್ಷುಲ್ಲಕ ಕಾರಣಗಳಿಗೆ ಕಿತ್ತಾಡುತ್ತಿದ್ದರು. ಇತ್ತೀಚಿಗೆ ಟಿವಿ ನೋಡುತ್ತಿದ್ದಾಗ ಚಾನಲ್ ಬದಲಿಸುವ ವಿಚಾರದಲ್ಲಿಯೂ ಇವರಿಬ್ಬರ ನಡುವೆ ಮಾರಮಾರಿ ನಡೆದಿತ್ತು. ಗುರುವಾರದಂದು ಮತ್ತೆ ಗಲಾಟೆ ಆರಂಭಿಸಿದ ಈ ಇಬ್ಬರು ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕಿರಣ್ ಶೆಟ್ಟಿ ಮುಸ್ತಾಫನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಜೈಲು ಸಿಬ್ಬಂದಿ ಅಧೀಕ್ಷಕಿ ದಿವ್ಯಶ್ರೀ ಅವರೊಂದಿಗೆ ಮುಸ್ತಾಫ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಡಿಸಿಪಿ ರುದ್ರಮುಣಿ, ಸಿಸಿಬಿ ಪೊಲೀಸ್ ಪ್ರಕಾಶ್, ಮೇಟಗಳ್ಳಿ ಪೊಲೀಸ್ ಸುನಿಲ್ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: