ಸುದ್ದಿ ಸಂಕ್ಷಿಪ್ತ

ನ.10ಕ್ಕೆ ಜಿಲ್ಲಾಮಟ್ಟದ ಯುವಜನೋತ್ಸವ ಉದ್ಘಾಟನೆ

ಚಾಮರಾಜನಗರ,ನ.9-ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವನೋತ್ಸವ, ಯುವ ಸಮ್ಮೇಳನ, ಯುವ ಕಾರ್ಯಾಗಾರ ಹಾಗೂ ಯುವ ತರಬೇತಿ ಶಿಬಿರದ ಉದ್ಘಾಟನೆಯನ್ನು ನ.10ರಂದು ಬೆಳಿಗ್ಗೆ 11.30 ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಭವನದಲ್ಲಿ ಆಯೋಜಿಸಲಾಗಿದೆ.

ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಗೀತಾ ಮಹದೇವಪ್ರಸಾದ್ (ಎಂ.ಸಿ.ಮೋಹನಕುಮಾರಿ) ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.

ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ, ಲೋಕಸಭಾ ಸದಸ್ಯ ಆರ್.ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್.ನರೇಂದ್ರ, ಸಂದೇಶ್ ನಾಗರಾಜು, ಕೆ.ಟಿ. ಶ್ರೀಕಂಠೇಗೌಡ, ಆರ್.ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಆರ್.ಉಮೇಶ್, ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್.ಬಸವರಾಜು, ನಗರಸಭೆಯ ಅಧ್ಯಕ್ಷ ಶೋಭ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಹೇಲ್ ಅಲಿಖಾನ್,  ನಗರಸಭೆ ಉಪಾಧ್ಯಕ್ಷ ಆರ್.ಎಂ.ರಾಜಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಪಿ.ಎನ್.ದಯಾನಿಧಿ, ನಗರಸಭೆ ಸದಸ್ಯ ಸೆಲ್ವಿಬಾಬು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಎರಡು ದಿನಗಳು ನಡೆಯಲಿರುವ ಕಾರ್ಯಕ್ರಮದಲ್ಲಿ ನ.10ರಂದು ಜಾನಪದ ನೃತ್ಯ, ಜಾನಪದ ಗೀತೆ, ಏಕಾಂಕ ನಾಟಕ, ಆಶುಭಾಷಣ, ಗಿಟಾರ್, ಹಾರ್ಮೋನಿಯಂ, ಶಾಸ್ತ್ರೀಯ ವಾದ್ಯಗಳು, ಶಾಸ್ತ್ರೀಯ ಗಾಯನ (ಹಿಂದೂಸ್ಥಾನಿ, ಕರ್ನಾಟಕ), ಶಾಸ್ತ್ರೀಯ ನೃತ್ಯ (ಮಣಿಪುರಿ, ಒಡಿಸ್ಸಿ. ಭರತನಾಟ್ಯಂ, ಕಥಕ್, ಕುಚಿಪುಡಿ) ನಡೆಯಲಿದೆ. ನ.11ರಂದು ಯುವ ಸಮ್ಮೇಳನ, ಯುವ ಕಾರ್ಯಾಗಾರ ಹಾಗೂ ಯುವ ತರಬೇತಿ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. (ವರದಿ-ವಿಎಸ್ಎಸ್, ಎಂ.ಎನ್)

Leave a Reply

comments

Related Articles

error: