ಕರ್ನಾಟಕ

ಟಿಪ್ಪು ಜಯಂತಿ ಹಿನ್ನಲೆ : ಮದ್ಯ ಮಾರಾಟ ನಿಷೇಧ

ರಾಜ್ಯ(ಚಾಮರಾಜನಗರ) ನ. 9 :- ಚಾಮರಾಜನಗರ ಪಟ್ಟಣದಲ್ಲಿ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆ ಹಿನ್ನಲೆಯಲ್ಲಿ ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 10ರ ಮಧ್ಯರಾತ್ರಿಯವರೆಗೆ ಚಾಮರಾಜನಗರ ಪಟ್ಟಣದ 5 ಕಿ. ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ.

ಸೂಚಿತ ಅವಧಿಯಲ್ಲಿ (ಕೆ.ಎಸ್.ಬಿ.ಸಿ.ಎಲ್ ಡಿಪೋ ಹೊರತುಪಡಿಸಿ) ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ ಹಾಗೂ ಮದ್ಯ ದಾಸ್ತಾನು ಮಾಡಬಾರದೆಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: