ಕರ್ನಾಟಕ

ನ.11-12 : ಪದವೀಧರ ಪ್ರಾಥಮಿಕ ಶಿಕ್ಷಕರ ಪರೀಕ್ಷೆ

ಮೈಸೂರು (ನ.9): ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯನ್ನು 6 ರಿಂದ 8ನೇ ತರಗತಿ ಇದೆ ಮೊದಲ ಬಾರಿ ನಡೆಸಲಾಗುತ್ತಿದೆ. ಸ್ವರ್ಧಾತ್ಮಕ ಪರೀಕ್ಷೆಯು ನ.11 ಮತ್ತು ನ.12 ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ರಂದೀಪ್.ಡಿ ಅವರು ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮೈಸೂರು ಜಿಲ್ಲೆಯಲ್ಲಿ 7 ಪರೀಕ್ಷ ಕೇಂದ್ರಗಲ್ಲಿ ಒಟ್ಟು 2909 ಅಭ್ಯಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. 7 ಕೇಂದ್ರಗಳಿಗೆ 7 ಅಧೀಕ್ಷರನ್ನು ಮತ್ತು 3 ಜನ ಫೀಲ್ಡ್ ಆಫಿಸರ್ಸ್ ನೆಮಿಸಲಾಗಿದೆ. ಪರೀಕ್ಷೆ ನಡೆಯುವ ವೇಳೆ ಸೂಕ್ತವಾದ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ, ಎಸಿ ಉಪಸ್ಥಿತರಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: