ಮೈಸೂರು

‘ಧರ್ಮಭೂಮಿ ಭಾರತ’ ಹಾಡು ಬಿಡುಗಡೆ ನ.12ಕ್ಕೆ

ಖ್ಯಾತ ಗಿಟಾರ್ ವಾದಕ ಬೈಜು ಧರ್ಮಜನ್ ಅವರು ಗಾಯಕ ವಿಜಯ್ ಹೆಗಡೆ ಅವರೊಂದಿಗೆ ಸೇರಿ ಹಾಡಿರುವ ‘ಧರ್ಮಭೂಮಿ ಭಾರತ’ ಎಂಬ ಹೊಸ ಹಾಡನ್ನು ನ.12 ರಂದು ಅಂತರ್ಜಾಲದಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಗಾಯಕ ವಿಜಯ್ ಹೆಗಡೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

5 ನಿಮಿಷಗಳಿರುವ ಈ ಹಾಡು “ಧರ್ಮಗುರುವೇ ಭಾರತ…. ವಿಶ್ವಶಾಂತಿಗಾಗಿ ದುಡಿವ ಭಾರತ.. ಪುಣ್ಯಭೂಮಿ ಭಾರತ…” ಎಂಬ ಸಾಲುಗಳಿಂದ ಪ್ರಾರಂಭವಾಗುತ್ತದೆ.  ಈ ಹಾಡು ಸಿನಿಮಾಗೆ ಸಂಬಂಧಿಸಿಲ್ಲ. ಭಾರತದ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿಯುವ ಪ್ರಯತ್ನವಾಗಿದೆ. ಜೊತೆಗೆ ಇದು ಬರೀ ಹಾಡಾಗಿರದೆ  ಒಂದು ಅರಿವಾಗಿಸುವ ಪ್ರಯತ್ನವಾಗಿದೆ.

ಹೊಸ ಸಂಗೀತದ ಪ್ರಯೋಗ ಮಾಡಲಾಗಿದೆ. ಮೈಸೂರಿನ ಹುಡುಗರನ್ನು ಸೇರಿಸಿಕೊಂಡು, ಮಂಡ್ಯ, ಕೊಡಗು ಮತ್ತು ಮೈಸೂರಿನ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಧರ್ಮಭೂಮಿ ನಮ್ಮದೇಶದ ವೈಭವ, ಶ್ರೀಮಂತಿಕೆ, ಕಲಾ ಕೌಶಲ್ಯಗಳನ್ನು ಬಿಂಬಿಸುವ ಹಾಡಾಗಿದೆ. ದೇಶದ ಅಭೂತಪೂರ್ವ ಸಂಸ್ಕೃತಿಯನ್ನು ಎತ್ತಿಹಿಡಿಯುವುದಲ್ಲದೇ ನಮ್ಮ ದೇಶದ ವೀರಯೋಧರ ಹಾಗೂ ಮಹಾನ್ ಚೇತನಗಳ ತ್ಯಾಗ ಬಲಿದಾನಗಳನ್ನು ನೆನೆಯುವ ಸಣ್ಣದೊಂದು ಶ್ರದ್ಧಾಂಜಲಿ ಎಂದು ಹೇಳಿದರು.

ಈ ಹಾಡಿಗೆ ಕೆ.ಎಸ್.ಚೌಡಪ್ಪ ರೆಡ್ಡಿ ಅವರ ಸಾಹಿತ್ಯವನ್ನು ಬಳಸಿಕೊಳ್ಳಲಾಗಿದ್ದು, ಬೈಜು ಧರ್ಮಜನ್ ಅವರು ನಿರ್ಮಿಸಿದ್ದಾರೆ. ‘ಕನ್ನಡಿ ಕ್ರಿಯೇಷನ್’ ರವರು ಹಾಡಿನ ಚಿತ್ರೀಕರಣವನ್ನು ವಹಿಸಿಕೊಂಡಿದ್ದಾರೆ. ಗುರುಪ್ರಸಾದ್ ಮತ್ತು ವಿನೋದ್ ರಂಗ ನಿರ್ದೇಶಿಸಿದ್ದಾರೆ. ಎನೋಶ್ ಒಲೀವೇರ ರ  ಛಾಯಾಗ್ರಹಣ, ರಂಜಿತ್ ಸೇತು ಅವರ ಸಂಕಲನ ಮತ್ತು ಶ್ರೀನಿವಾಸ್ ಕಶ್ಯಪ್ ಅವರು ಸಮಾವೇಶ ಸಹಾಯಕರಾಗಿರುತ್ತಾರೆ ಎಂದು ತಿಳಿಸಿದರು.

ಸುಪ್ಪಿಗೋಷ್ಠಿಯಲ್ಲಿ ತಂಡದ ಸದಸ್ಯರಾದ ಗುರುಪ್ರಸಾದ್ ಸ್ವಾಮಿ, ರಂಜಿತ್ ಸೇತು, ವಿನೋದ್ ಕುಮಾರ್ ಮತ್ತು ವಿಜಯ್ ಹೆಗಡೆ ಹಾಜರಿದ್ದರು.

Leave a Reply

comments

Related Articles

error: