ಮೈಸೂರು

ಸೋಮಣ್ಣನವರಿಗೆ ‘ಜನರಾಜ್ಯೋತ್ಸವ ಪ್ರಶಸ್ತಿ’ ನೀಡಲು ತೀರ್ಮಾನ

ಕರ್ನಾಟಕ ಸರ್ಕಾರ ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸುವಂತೆ ಈ ಬಾರಿಯೂ ಸಹ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿತ್ತು. ಅದರಲ್ಲಿ ಆದಿವಾಸಿ ಜೇನುಕುರುಬ ನಾಯಕ ಸೋಮಣ್ಣ ಅವರ ಹೆಸರೂ ಸಹ ಪ್ರಕಟವಾಗಿತ್ತು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಣ್ತಪ್ಪಿನಿಂದ ಈ ಹೆಸರು ಪ್ರಕಟವಾಗಿದೆ ಎಂದು ಹೇಳಿ ಸೋಮಣ್ಣ ಅವರ ಹೆಸರನ್ನು ಕೈಬಿಟ್ಟಿತ್ತು.

ಈ ಹಿನ್ನೆಲೆಯಲ್ಲಿ ಅದಿವಾಸಿ ಬುಡಕಟ್ಟು ಜನಾಂಗದ ವಿರೋಧ ಸರ್ಕಾರದ ಧೋರಣೆಯನ್ನು ಖಂಡಿಸಿ ಸೋಮಣ್ಣನವರಿಗೆ ಮರಳಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಸರ್ಕಾರ ಇವರ ಒತ್ತಾಯಕ್ಕೆ ಮಣಿಯದ ಕಾರಣ ಆದಿವಾಸಿ ಸಮುದಾಯದವರೇ ಸೇರಿ ಸೋಮಣ್ಣನವರಿಗೆ ‘ಜನರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ಗುರುವಾರ ಗಿರಿಜನ ಸಮುದಾಯದ ಸಮಾಜ ಸೇವಕ ಮಹೇಂದ್ರ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನ.12 ರ ಮಧ್ಯಾಹ್ನ 3 ಗಂಟೆಗೆ ಹೆಗ್ಗಡದೇವನಕೋಟೆಯ ಮತ್ತ ಹಾಡಿಯಲ್ಲಿ ಹಿರಿಯ ಸಾಹಿತಿ ದೇವನೂರು ಮಹಾದೇವ ಸೋಮಣ್ಣನವರಿಗೆ ‘ಜನರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ  ಕ್ಷೀರಸಾಗರ, ಧನಂಜಯ್, ಸ್ವಾಮಿ ಮತ್ತು ಕರಿಯಪ್ಪ ಹಾಜರಿದ್ದರು.

Leave a Reply

comments

Related Articles

error: