
ಮೈಸೂರು
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ರೌಡಿಶೀಟರ್ ನೇಣಿಗೆ ಶರಣು
ಮೈಸೂರು,ನ.9:- ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ರೌಡಿಶೀಟರ್ ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತನನ್ನು ರೌಡಿಶೀಟರ್ ಗಿರಿ ಅಲಿಯಾಸ್ ಚಟ್ಟಿಗಿರಿ ಎಂದು ಹೇಳಲಾಗಿದೆ. ಈತ ಬಸವೇಶ್ವರ ರಸ್ತೆಯಲ್ಲಿ ವಾಸವಿದ್ದ, ಸಾಯಂಕಾಲ ಕಾಫಿ ಕುಡಿದು ಬರುತ್ತೇನೆಂದು ಹೇಳಿ ಹೋದವನು ಸ್ವಲ್ಪ ಹೊತ್ತು ಬಿಟ್ಟು ಹಿಂದಿರುಗಿದ್ದಾನೆ. ಬಳಿಕ ರೂಮು ಸೇರಿದವನು ಎಷ್ಟು ಹೊತ್ತಾದರೂ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡು ಹೋಗಿ ನೋಡಲಾಗಿ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)