ಮೈಸೂರು

ಕೌಟುಂಬಿಕ ಕಲಹದ ಹಿನ್ನೆಲೆ : ಮಗು ಸಮೇತ ತಾಯಿ ನೇಣಿಗೆ‌ ಶರಣು

ಮೈಸೂರು,ನ.9:- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ  ಮಗು ಸಮೇತ ತಾಯಿ  ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಮೃತರನ್ನು ಮುದಗನೂರು ಗ್ರಾಮದ ನಿವಾಸಿ ಪ್ರಶಾಂತ್ ಪತ್ನಿ ಮಹಾಲಕ್ಷ್ಮಿ (ಖುಷಿ-30) ಎಂದು ಹೇಳಲಾಗಿದ್ದು, ಈಕೆ  ಒಂದು ವರ್ಷದ ಹೆಣ್ಣು ಮಗು ಪಿಂಕು ಸಮೇತ ನೇಣಿಗೆ‌ ಕೊರಳೊಡ್ಡಿದ್ದಾಳೆ. ಪಕ್ಕದ ಕೊಳವಿಗೆ ಗ್ರಾಮದ ಆಶ್ರಮ‌ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.ಮೂರು ವರ್ಷಗಳ ಹಿಂದೆ ಪ್ರಶಾಂತ್ ಜೊತೆ ಮದುವೆಯಾಗಿತ್ತು. ಗಂಡ ಹೆಂಡತಿ ಮಧ್ಯೆ ಸಾಮರಸ್ಯದ ಕೊರತೆಯುಂಟಾಗಿದ್ದು, ಇಬ್ಬರಿಗೂ ಜಗಳ ನಡೆದ  ಹಿನ್ನೆಲೆಯಲ್ಲಿ  ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: