ಮೈಸೂರು

ವಸ್ತು ಪ್ರದರ್ಶನ ಆವರಣದಲ್ಲಿ ಜುಂಬ ನೃತ್ಯ ನ.12

ಮೈಸೂರು, ನ.9 : ನಗರದ ಆರ್ಟ್ ಪ್ಲಾನೆಟ್ ಪಿಟ್ ನೆಸ್ ಸಂಸ್ಥೆ ಹಾಗೂ ಮೈಸೂರು ದಸರಾ ವಸ್ತು ಪ್ರದರ್ಶನ ಸಾಂಸ್ಕೃತಿಕ ಉಪಸಮಿತಿ ಸಹಯೋಗದಲ್ಲಿ ನ.12ರಂದು ಜುಂಬಾ ಪ್ರಮಾಣೀಕೃತ ತರಬೇತುದಾರರಿಂದ ಮೊಟ್ಟ  ಮೊದಲ ಬಾರಿಗೆ ಜುಂಬ ಸಮೂಹ  ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಿರಿಬಾಲು ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಂದು ಸಂಜೆ 7 ಗಂಟೆಯಿಂದ 8.30ರವರೆಗೆ ವಸ್ತುಪ್ರದರ್ಶನದ ಪಿ.ಕಾಳಿಂಗರಾವ್ ರಂಗಮಂದಿರದಲ್ಲಿ ನಡೆಯುವ ಜುಂಬ ಉದ್ಘಾಟನೆಯಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಬಿ.ಸಿದ್ದರಾಜು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ಶಶಿಕುಮಾರ್, ದಿ.ಸಿಟಿ ಕೋ-ಅಪರೇಟಿವ್ ಬ್ಯಾಂಕ್ ನಿರ್ದೇಶಕಿ ಎಸ್.ನಾಗರತ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಹೆಚ್.ಚೆನ್ನಪ್ಪ, ಪಾಲಿಕೆ ಸದಸ್ಯ ಎಂ.ಕೆ.ಅಶೋಕ ಪಾಲ್ಗೊಳ್ಳುವರು.

1999ರಲ್ಲಿ ಕೊಲಂಬಿಯಾದಲ್ಲಿ ಪ್ರಚಾರಕ್ಕೆ ಬಂದ ಜುಂಬ ಸುಲಭ ನೃತ್ಯ ಪ್ರಕಾರವಾಗಿದೆ, ಎಲ್ಲಾ ವಯೋಮಾನದವರು ಫಿಟ್ ನೆಸ್ ಗೆ ಇದನ್ನು ಅಳವಡಿಸಿಕೊಂಡರೇ ಉತ್ತಮ ಆರೋಗ್ಯದೊಂದಿಗೆ ದೇಹದಲ್ಲಿರುವ ಹೆಚ್ಚಿನ ಕೊಬ್ಬು ಶೀಘ್ರವಾಗಿ ಕರಗುವುದು, ಅಂದು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಪಾಲ್ಗೊಳ್ಳಲಿಚ್ಛಿಸುವವರು ಕೆಂಪು ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ದರಿಸಿಕೊಂಡು ಬರಬೇಕು ಎಂದು ಹೇಳಿದರು.

ಮಾಹಿತಿಗಾಗಿ ಮೊ.ನಂ. 9035090785, 9164851211, 8722799997 ಸಂಪರ್ಕಿಸಬಹುದು. ಇದೇ ಸಂದರ್ಭದಲ್ಲಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಗೋಷ್ಠಿಯಲ್ಲಿ ನೃತ್ಯ ತರಬೇತಿದಾರರಾದ ಅರ್ಜುನ್ ಚ್ಯಾಂಪ್, ನಿಶ್ಚಿತ್ ಜಾಧವ್, ಕವಿತ ರಾಹುಲ್, ಸುನೀತಾ ತೇಜ್ ಮೊದಲಾದವರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: