ಮೈಸೂರು

ಕಲಾವಿದರ ಪ್ರೋತ್ಸಾಹಕ್ಕೆ ಮೈಸೂರಿನಲ್ಲಿ ನೂತನ ಸಂಘ ಅಸ್ತಿತ್ವಕ್ಕೆ

ಮೈಸೂರು, ನ.9– ಶಿವಾಜಿ ಪಿಚ್ಚರ್ಸ್ ಹಾಗೂ ಜೂಮ್ ಕ್ರಿಯೇಷನ್ಸ್ ವತಿಯಿಂದ ನ.22ರಂದು ಸಂಜೆ 5ಕ್ಕೆ ಕಲಾಮಂದಿರದಲ್ಲಿ ನೂತನ ಸಂಘ ಸಂಸ್ಥೆ ಘೋಷಣೆಯೊಂದಿಗೆ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಸಾಧನೆ ಮಾಡಿರುವ 101 ಕಲಾವಿದರನ್ನು ಸನ್ಮಾನಿಸಲಾಗುತ್ತಿದೆ. ಜೊತೆಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಜೂನಿಯರ್ ನರಸಿಂಹರಾಜು ತಿಳಿಸಿದರು.

ಮೈಸೂರಿನಲ್ಲಿ ಹಲವಾರು ಪ್ರವಾಸಿ ತಾಣಗಳು ಚಿತ್ರೀಕರಣಕ್ಕೆ ಪ್ರಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಭಾಷಾ ಚಿತ್ರಗಳು ಮೈಸೂರಿನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಆದರೆ ಮೈಸೂರಿನಲ್ಲಿರುವ ಕಲಾವಿದರಿಗೆ ಸರಿಯಾದ ಅವಕಾಶ ದೊರೆಯದೇ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಕಲಾವಿದರಿಗೆ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಕಿರುತೆರೆ, ಚಲನಚಿತ್ರ, ತಂತ್ರಜ್ಞಾನ, ನಿರ್ದೇಶಕರು ಹಾಗೂ ನಿಮಾಪಕರ ಸಂಘ ಎಂಬ ನೂತನ ಸಂಘ ಸ್ಥಾಪನೆಯನ್ನು ಘೋಷಣೆ ಮಾಡಲಾಗುತ್ತಿದೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದರೊಂದಿಗೆ ಅಂದು ನಡೆಯುವ ಸಮಾರಂಭದಲ್ಲಿ ಸಂಘಕ್ಕೆ ಸೇರಲ್ಪಡುವ ಅಭ್ಯರ್ಥಿಗಳ ನೋಂದಣಿ ಸಹ ಪ್ರಾರಂಭವಾಗಲಿದ್ದು, ನಂತರದಲ್ಲಿ ಕಲಾವಿದರ ಯಾವುದೇ ಸಮಸ್ಯೆಗಳ ಇತ್ಯರ್ಥಕ್ಕಾಗಿ ಈ ಸಂಘ ಸ್ಪಂದಿಸಲಿದೆ. ಜೊತೆಗೆ ಕಲಾವಿದರಿಗೆ ಕಿರುತೆರೆ ಮತ್ತು ಚಲನಚಿತ್ರದಲ್ಲಿ ಅವಕಾಶ ದೊರಕಿಸುವ ಕೆಲಸವನ್ನು ಈ ಸಂಸ್ಥೆ ಮಾಡಲಿದೆ ಎಂದರು.

ಗೋಷ್ಠಿಯಲ್ಲಿ ನಿರ್ದೇಶಕ ಜೂಮ್ ರವಿ, ನಿಮಾರ್ಪಕ ಶಿವಾಜಿ, ಪ್ರಶಾಂತ್, ಶ್ರೀನಾಥ್, ಗಣೇಶ್, ಸವಿತಾ ಶ್ರೀನಿವಾಸ್, ಲಕ್ಷ್ಮೀನಾರಾಯಣ್ ಹಾಗೂ ಶಶಿಭೂಷಣ್ ಸೇರಿದಂತೆ ಇನ್ನಿತರರರು ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: