ಮೈಸೂರು

ಕಳ್ಳನೆಂದು ಭಾವಿಸಿ ಇನ್ಫೋಸಿಸ್ ಉದ್ಯೋಗಿಗೆ ಥಳಿತ

ಮೈಸೂರು,ನ.9:- ಕಳ್ಳನೆಂದು ಭಾವಿಸಿ ಇನ್ಫೋಸಿಸ್ ಉದ್ಯೋಗಿಯೋರ್ವರಿಗೆ  ಮನಸೋ ಇಚ್ಛೆ ಥಳಿಸಿದ ಘಟನೆ  ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ‌ ನಡೆದಿದೆ.

ಬೆಂಗಳೂರಿನ ಇನ್ಫೋಸಿಸ್ ಉದ್ಯೋಗಿ ಮನೋಜ್ ಕುಮಾರ್ ಸುಂದರಂ(35) ಪೆಟ್ಟು ತಿಂದವರಾಗಿದ್ದಾರೆ. ಸಬರ್ ಬಸ್ ನಿಲ್ದಾಣದಲ್ಲಿ ಏಕಾಂಗಿಯಾಗಿ ಕುಳಿತಿದ್ದಾಗ ಏಕಾಏಕಿ ಕಳ್ಳನೆಂದು ಭಾವಿಸಿ ಹಲ್ಲೆ ನಡೆಸಲಾಗಿದೆ. ಬಳಿಕ ಲಷ್ಕರ್ ಪೊಲೀಸರು  ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಆತ ಅಮಾಯಕ ಎಂದು ತಿಳಿದು ಬಂದಿದೆ.  ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: