ದೇಶಪ್ರಮುಖ ಸುದ್ದಿ

ಕನಿಮೋಳಿ ಮೇಲೂ ದೂರು ನೀಡಿದ್ದೆ, ಏಕೆ ದಾಳಿ ಮಾಡಿಲ್ಲ: ಸ್ವಾಮಿ ಪ್ರಶ್ನೆಗೆ ದನಿಗೂಡಿಸಿದ ಟ್ವಿಟಿಗರು

ಚೆನ್ನೈ (ನ.9): ನಾನು ಶಶಿಕಲಾ ನಟರಾಜನ್ (ಚಿನ್ನಮ್ಮ) ಮಾತ್ರವಲ್ಲ ಕರುಣಾನಿಧಿ ಮತ್ತು ಅವರ ಪುತ್ರಿ ಕನಿಮೋಳಿ ಅವರ ಅವ್ಯವಹಾರಗಳ ಬಗ್ಗೆ 30 ಪುಟಗಳ ವಿವರವಾದ ದೂರು ನೀಡಿದ್ದೆ. ಆದರೆ ಆದಾಯ ತೆರಿಗೆ ಅಧಿಕಾರಿಗಳು ಏಕೆ ಅವರ ಮೇಲೆ ದಾಳಿ ಮಾಡಿಲ್ಲ ಎಂದು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

ಅವರ ಈ ಹೇಳಿಕೆ ಸಾಮಾಜಿಕ ತಾಣದಲ್ಲಿ ಬಹಳ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೆಲ ದಿನಗಳ ಹಿಂದೆಯಷ್ಟೇ ಚೆನ್ನೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಿಎಂಕೆ ಅಧಿನಾಯಕ ಎಂ ಕರುಣಾನಿಧಿಯ ಅವರ ಆರೋಗ್ಯ-ಕ್ಷೇಮ ವಿಚಾರಿಸಿದ್ದರು. ಈ ಬೆಳವಣಿಗೆ ಎಐಎಡಿಎಂಕೆ ಪಕ್ಷದ ನಾಯಕರು ಹುಬ್ಬೇರಿಸುವಂತೆ ಮಾಡಿತ್ತು. ಇದೂ ಸಾಲದೆಂಬಂತೆ ಕರುಣಾನಿಧಿ-ಮೋದಿ ಭೇಟಿ ಬೆನ್ನ ಹಿಂದೆಯೇ ಎಐಎಡಿಎಂಕೆ ಪಕ್ಷದ ಮೇಲೆ ಐಟಿ ದಾಳಿ ನಡೆದಿದೆ.

ಇದೀಗ ಸುಬ್ರಹ್ಮಣಿಯನ್ ಸ್ವಾಮಿಯವರು ಪ್ರಶ್ನೆ ಕೇಳುವುದರೊಂದಿಗೆ ದೇಶದ ನಾಗರಿಕರ ಅನುಮಾನಗಳಿಗೆ ಇಂಬು ನೀಡಿದಂತಾಗಿದ್ದು, ಟ್ವೀಟಿಗರು ಬಿಜೆಪಿ ಮತ್ತು ಮೋದಿ ನಡೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅಪನಗದೀಕರಣದ ವಾರ್ಷಿಕೋತ್ಸವಕ್ಕೆ ಎರಡು ದಿನ ಮೊದಲು. ಅಪನಗದೀಕರಣದ ವಿರುದ್ಧ ಮಾಡಬೇಕಾಗಿದ್ದ ಪ್ರತಿಭಟನೆಯನ್ನೂ ಡಿಎಂಕೆ ಕೈಬಿಟ್ಟಿತ್ತು. ಈಗ ನೋಡಿದರೆ ಗುರುವಾರ ಬೆಳಿಗ್ಗೆಯಿಂದಲೇ ಎಐಎಡಿಎಂಕೆ ಪಕ್ಷದ ಚೆನ್ನೈ ಮತ್ತು ಬೆಂಗಳೂರು ಕಚೇರಿ, ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಈ ಬೆಳವಣಿಗೆಗಳು ಏನು ಸೂಚಿಸುತ್ತವೆ ಎಂದು ಟ್ವಿಟ್ಟಿಗರು ಕೇಳುತ್ತಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: